ಪುದುವಿನಲ್ಲಿ ಸ್ವಚ್ಚತಾ ಕಾರ್ಯಕ್ರಮ

Update: 2018-07-16 13:57 GMT

ಬಂಟ್ವಾಳ, ಜು. 16:  ಪುದು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಕೆನರಾ ಕಾಲೇಜು ಮಂಗಳೂರು ಎನ್‌ಎಸ್‌ಎಸ್ ವಿಭಾಗದ ಸಹಯೋಗದೊಂದಿಗೆ ರವಿವಾರ ಸ್ವಚ್ಛತಾ ಕಾಯಕ್ರಮವನ್ನು ಆಯೋಜಿಸಲಾಯಿತು. ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಫರಂಗಿಪೇಟೆ ಬಸ್ಸು ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು ಪುದು ಪಂಚಾಯತ್ ವ್ಯಾಪ್ತಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಲ್ಲಾ ನಾಗರಿಕರ ಸಹಕಾರವಿದ್ದರೆ ಮಾತ್ರ  ಸ್ವಚ್ಛತೆ ಯಶಸ್ವಿಯಾಗಿ ನಡೆಯಲು ಸಾಧ್ಯವಿದೆ ಎಂದರು.

ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ ಉಮರ್ ಫಾರೂಕ್ ಮಾತನಾಡಿದರು. ಪುದು ಪಂಚಾಯತ್ ಉಪಾಧ್ಯಕ್ಷೆ ಲೀಡಿಯೋ ಪಿಂಟೋ, ಮಾಜಿ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಮಾಜಿ ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ, ಲಕ್ಷ್ಮೀ, ಸದಸ್ಯರಾದ ಮನೋಜ್ ಆಚಾರ್ಯ, ಜಯಂತಿ, ಆಶಾನಯನ, ಮುಮ್ತಾಝ್, ರಶೀದಾ, ಸುಜಾತ, ರಿಯಾಝ್ ಕುಂಪಣಮಜಲು, ಇಕ್ಬಾಲ್ ಸುಜೀರು, ಮುಸ್ತಾಫ ಅಮ್ಮೆಮಾರ್, ಮಹಮ್ಮದ್ ಫರಂಗಿಪೇಟೆ, ರಯಾನ ಮಾರಿಪಳ್ಳ, ಪಿಡಿಓ ಹೇಮಲತಾ, ಪಂಚಾಯತ್ ಸಿಬ್ಬಂದಿಗಳಾದ ಅಬ್ದುಲ್ ಸಲಾಂ, ಸುರೇಖಾ, ಯಶೋಧಾ, ಕೈಫ್, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಪ್ರಸನ್ನ, ಪ್ರಮುಖರಾದ ಸೌಕತ್‌ಅಲಿ ಪಾಡಿ, ಮಜೀದ್ ಪೇರಿಮಾರ್, ರಫೀಕ್ ಫರಂಗಿಪೇಟೆ, ಮೋನಪ್ಪ ಅಮೀನ್, ಆದಂ ಅಮ್ಮೆಮಾರ್, ಹನೀಫ್ ಅಮ್ಮೆಮಾರ್ ಹಾಜರಿದ್ದರು. ಯೂಸೂಫ್ ಅಲಂಕಾರ್ ಹಾಗೂ ಕೃಷ್ಣ ಕುಮಾರ್ ಪೂಂಜಾ ಸಹಕಾರ ನೀಡಿದರು.

ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಫರಂಗಿಪೇಟೆ ಪರಿಸರದಲ್ಲಿ ಸ್ವಚ್ಛತೆಯ ಜಾಗೃತಿ ಜಾಥ ನಡೆಸಿ, ಬೀದಿ ನಾಟಕ ಪ್ರದರ್ಶಿಸಿದರು. ಪುದು ಪಂಚಾಯತಿಯ ಮನೆ ಮನೆಗಳಿಗೆ ತೆರಳಿ ಸ್ವಚ್ಛತೆಯ ಅರಿವು ಮೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News