ಬ್ಯಾರೀಸ್‌ನಿಂದ ಕುಂದಾಪುರ ಠಾಣೆಗೆ ಬ್ಯಾರಿಕೇಡ್ ಹಸ್ತಾಂತರ
Update: 2018-07-16 21:32 IST
ಕುಂದಾಪುರ, ಜು.16: ಕೋಡಿಯ ಬ್ಯಾರೀಸ್ ಗ್ರೂಪ್ ಆಫ್ ಎಜ್ಯುಕೇಶನ್ ಹಾಗೂ ಕೋಟೇಶ್ವರದ ಬ್ಯಾರೀಸ್ ಗ್ರೀನ್ ಅವೆನ್ಯೂ ವತಿಯಿಂದ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಕುಂದಾಪುರ ಪೊಲೀಸ್ ಠಾಣೆಗೆ ಬ್ಯಾರಿಕೇಡ್ ಒಂದನ್ನು ಸೋಮವಾರ ಹಸ್ತಾಂತರಿಸಲಾಯಿತು.
ಬ್ಯಾರೀಸ್ ಸಂಸ್ಥೆಯ ವ್ಯವಸ್ಥಾಪಕ ಯೂಸುಫ್ ಕೋಡಿಯವರು ಬ್ಯಾರಿಕೇಡ್‌ನ್ನು ಕುಂದಾಪುರ ಠಾಣಾ ಉಪ ನಿರೀಕ್ಷಕ ಆರ್.ಹರೀಶ್‌ರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಕುಂದಾಪುರ ಪುರಸಭಾ ಸದಸ್ಯೆ ಜ್ಯೋತಿ, ಪೊಲೀಸ್ ಕಾನ್‌ಸ್ಟೇಬಲ್ ಚೇತನ್, ಸ್ಥಳೀಯ ಮುಖಂಡರಾದ ಕೆ.ಎಚ್.ಹಂಝ, ಸುರೇಶ್ ಕಿಣಿ, ಬಿ.ಕೆ.ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.