ಗುರಿಕಾರ ಎಡ್ಮೇರು ಕರಿಯ ಪೂಜಾರಿ ನಿಧನ
Update: 2018-07-16 22:07 IST
ಶಿರ್ವ, ಜು.16: ಎಡ್ಮೇರು ಸಾವಿರಾಳ ಧೂಮಾವತಿ ದೈವಸ್ಥಾನದಲ್ಲಿ ಸುಮಾರು 40 ವರ್ಷಕ್ಕೂ ಅಧಿಕ ಕಾಲ ಬಿಲ್ಲವ ಸಮುದಾಯದ ಗುರಿಕಾರರಾಗಿ ಸೇವೆ ಸಲ್ಲಿಸಿದ ಎಡ್ಮೇರು ಕರಿಯ ಪೂಜಾರಿ (82) ಜು.16ರಂದು ಕುಕ್ಕುಪಲ್ಕೆಯ ಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಕೃಷಿಕರೂ ಹಾಗೂ ಸಮಾಜ ಸೇವಕರಾಗಿದ್ದ ಇವರು ಬೆಳ್ಳೆ ಗ್ರಾಪಂ ಸದಸ್ಯ ಹಾಗೂ ಬಿಜೆಪಿ ಬೆಳ್ಳೆ ಘಟಕದ ಕಾರ್ಯದರ್ಶಿ ಸುಧಾಕರ ಪೂಜಾರಿ, ಉಪ ನ್ಯಾಸಕ ರತ್ನಾಕರ ಪೂಜಾರಿ, ಪತ್ರಕರ್ತ ಉಮೇಶ್ ಕುಕ್ಕುಪಲ್ಕೆ ಸಹಿತ ಆರು ಮಂದಿ ಪುತ್ರರನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಕೇಮಾರು ಶ್ರೀಈಶ ಸ್ವಾಮೀಜಿ, ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ಶಿವಾಜಿ ಸುವರ್ಣ, ಪಾಣಾರ ಸಂಘದ ಅಧ್ಯಕ್ಷ ಸುಧಾಕರ ಪಾಣಾರ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.