×
Ad

ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ: ಮೆಡಿಕಲ್ ವಿರುದ್ಧ ಪ್ರಕರಣ

Update: 2018-07-16 22:21 IST

ಉಡುಪಿ, ಜು.16: ವೈದ್ಯರ ಸಲಹಾ ಚೀಟಿ ಇಲ್ಲದೆ ಅಲ್ಡ್ರಾಸೆಟ್ ಅನು ಸೂಚಿ ಔಷಧವನ್ನು ಮಾರಾಟ ಮಾಡುತ್ತಿದ್ದ ಉಡುಪಿ ಮೆಡಿಕಲ್ ಶಾಪ್ ವಿರುದ್ಧ ಉಡುಪಿ ವೃತ್ತ ಸಹಾಯಕ ಔಷಧ ನಿಯಂತ್ರಕರು ಮತ್ತು ಪರವಾನಿಗೆ ಪ್ರಾಧಿಕಾರ ಸೋಮವಾರ ಪ್ರಕರಣ ದಾಖಲಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ಉಡುಪಿ ಲಂಡನ್ ಮೆಡಿಕಲ್‌ನಲ್ಲಿ ಹಲವು ಸಮಯಗಳಿಂದ ವೈದ್ಯರ ಸಲಹಾ ಚೀಟಿ ಇಲ್ಲದೇ ಔಷಧ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪ್ರಾಧಿಕಾರದ ಕೆ.ವಿ.ನಾಗರಾಜ, ಮೆಡಿಕಲ್‌ನ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲೆಯಲ್ಲಿ ಈ ರೀತಿ ಔಷಧಗಳನ್ನು ಮಾರಾಟ ಮಾಡುವ ಮೆಡಿಕಲ್‌ಗಳ ಮೇಲೆ ಪ್ರಾಧಿಕಾರ ನಿಗಾ ಇಟ್ಟಿದ್ದು, ದಾಳಿಯನ್ನು ಮುಂದುವರೆಸುವುದಾಗಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News