ಅಪಹರಣ ಪ್ರಕರಣ: ಆರೋಪಿ ಸೆರೆ
Update: 2018-07-16 23:13 IST
ಕಡಬ, ಜು.16. ವಿವಾಹಿತ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಅಪಹರಿಸಿದ ಪ್ರಕರಣವನ್ನು ಭೇದಿಸಿರುವ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನೂಜಿಬಾಳ್ತಿಲ ಗ್ರಾಮದ ಕೈಪನಡ್ಕ ನಿವಾಸಿ ಅನಿಲ್ ಎಂದು ಗುರುತಿಸಲಾಗಿದೆ. ನೆಲ್ಯಾಡಿ ಮೂಲದ ಮಹಿಳೆಯು ಜುಲೈ 11 ರಂದು ತನ್ನ ಇಬ್ಬರು ಮಕ್ಕಳನ್ನು ವಿಟ್ಲ ಸಮೀಪದ ಶಾಲೆಯೊಂದಕ್ಕೆ ಸೇರಿಸಲೆಂದು ತೆರಳಿದ್ದ ವೇಳೆ ಆರೋಪಿಯು ಮಕ್ಕಳ ಸಹಿತ ಮಹಿಳೆಯನ್ನು ಅಪಹರಿಸಿದ್ದಾ ನೆಂದು ಮಹಿಳೆಯ ಪತಿ ರಾಜೇಶ್ ಕಡಬ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ಬಗ್ಗೆ ತನಿಖೆ ನಡೆಸಿರುವ ಕಡಬ ಪೊಲೀಸರು ಸೋಮವಾರ ಮಹಿಳೆ ಹಾಗೂ ಮಕ್ಕಳನ್ನು ಹಾಸನದಲ್ಲಿ ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.