×
Ad

ನಿರಪರಾಧಿ ಅಲ್ಪಸಂಖ್ಯಾತರಿಗೆ ‘ಮನೆ-ಮಳಿಗೆ’ ಯೋಜನೆ

Update: 2018-07-16 23:16 IST

ಮಂಗಳೂರು, ಜು.16: ಸನ್ನಡತೆ ಆಧಾರದ ಮೇಲೆ ಕಾರಾಗೃಹ ವಾಸದಿಂದ ಬಿಡುಗಡೆಯಾದ ಅಲ್ಪಸಂಖ್ಯಾತ ಖೈದಿಗಳಿಗೆ, ಭಯೋತ್ಪಾದಕ ವಿರೋಧಿ ಚಟುವಟಿಕೆ, ಪ್ರಕರಣ ಸಾಬೀತಾಗದೆ ನ್ಯಾಯಾಲಯದಿಂದ ಬಿಡುಗಡೆಯಾದ ಅಲ್ಪಸಂಖ್ಯಾತರ ನಿರಪರಾಧಿಗಳಿಗೆ ಮನೆ-ಮಳಿಗೆ ಯೋಜನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಕೋಮುಗಲಭೆ/ಕೋಮು ಹಿಂಸಾಚಾರ ಸಂದರ್ಭಗಳಲ್ಲಿ ಹಾಗೂ ಪರಿಸರ ವಿಕೋಪದಿಂದ ಮನೆ, ವ್ಯಾಪಾರ ಸ್ಥಳ ಕಳೆದುಕೊಂಡ ಅಲ್ಪಸಂಖ್ಯಾತರಿಗೆ ಹಾಗೂ ವಿವಿಧ ಸುರಕ್ಷಿತ ಕಾಯ್ದೆಯಡಿ ಬಂಧಿತರಾಗಿ ಹಲವಾರು ವರ್ಷಗಳ ನಂತರ ನ್ಯಾಯಾಲಯದಿಂದ ಬಿಡುಗಡೆಗೊಂಡ ಅಲ್ಪಸಂಖ್ಯಾತರ ನಿರಪರಾಧಿಗಳಿಗೆ ಪುನರ್ವಸತಿಗಾಗಿ ಶೇ.3ರ ಬಡ್ಡಿದರದಲ್ಲಿ 5 ಲಕ್ಷ ರೂ. ಸಾಲ ಸೌಲಭ್ಯ ಒದಗಿಸಲಿದೆ. ಇದರಲ್ಲಿ ಶೇ. 50ರಷ್ಟು ಸಹಾಯಧನ ಲಭ್ಯವಿದೆ.

ಸ್ವಯಂ ಉದ್ಯೋಗ ಯೋಜನೆ: ಈ ಯೋಜನೆಯಡಿ 1 ಲಕ್ಷ ರೂ.ವರೆಗೆ ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಾಗಿ ರಾಷ್ಟ್ರೀಕೃತ ಬ್ಯಾಂಕ್ ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲಕ್ಕಾಗಿ ನಿಗಮದಿಂದ ಶೇ.50ರ ಅಥವಾ ಗರಿಷ್ಠ 35,000 ರೂ. ಸಹಾಯಧನ ಸೌಲಭ್ಯ ಹಾಗೆಯೇ 1 ಲಕ್ಷಕ್ಕೆ ಮೇಲ್ಪಟ್ಟು ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಾಗಿ ಪಡೆಯುವ ಸಾಲಕ್ಕಾಗಿ ನಿಗಮದಿಂದ ಶೇ. 33ರ ಅಥವಾ ಗರಿಷ್ಠ 2 ಲಕ್ಷ ರೂ. ಸಹಾಯಧನ ಸೌಲಭ್ಯವಾಗಲಿದೆ.

ಶ್ರಮಶಕ್ತಿ ಯೋಜನೆ: ಈ ಯೋಜನೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಾಂಪ್ರದಾಯಕ ಕುಶಲಕರ್ಮಿಗಳಿಗೆ ಮತ್ತು ಕುಲಕಸುಬುದಾರರಿಗೆ ಅವರ ವೃತ್ತಿ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಗರಿಷ್ಠ 50,000 ರೂ.ವರೆಗೆ ಶೇ.4ರ ಬಡ್ಡಿದರದಲ್ಲಿ ಸಾಲ ಸೌಲಭ್ಯ. ಇದರಲ್ಲಿ ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡುವ ಅರ್ಜಿದಾರರಿಗೆ ಶೇ.50ರ ಬ್ಯಾಕ್ ಆ್ಯಂಡ್ ಸಹಾಯಧನ ಸಿಗಲಿದೆ.

ಎಲ್ಲ ಯೋಜನೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಖು. ಆನ್‌ಲೈನ್ ವೆಬ್‌ಸೈಟ್ : www.kmdc.kar.nic.in/loan/login.aspx  ಅರಿವು ಯೋಜನೆಯ ವೆಬ್‌ಸೈಟ್: www.kmdc.kar.nic.in/arivu2 ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿ, ಹಾರ್ಡ್ ಕಾಪಿಯನ್ನು ಜಿಲ್ಲಾ ಕಚೇರಿಗೆ ಸಲ್ಲಿಸಲು ಆ.31 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೆೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನ ಆಝಾದ್ ಅಲ್ಪಸಂಖ್ಯಾತರ ಭವನ, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು, ಕಚೆೇರಿ ದೂ.ಸಂ.: 0824-2429044 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News