ಪಡುಬಿದ್ರಿ : ರಸ್ತೆ ಅಪಘಾತದಿಂದ ಮೂವರು ಮಂದಿಗೆ ಗಾಯ
Update: 2018-07-16 23:22 IST
ಪಡುಬಿದ್ರೆ, ಜು. 16: ಟಿಪ್ಪರ್- ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ಸೋಮವಾರ ಪಡುಬಿದ್ರೆ ಠಾಣಾ ವ್ಯಾಪ್ತಿಯ ಸಾಂತೂರಿನಲ್ಲಿ ನಡೆದಿದೆ.
ರಿಕ್ಷಾ ಚಾಲಕ ಪಡುಬಿದ್ರೆ ನಿವಾಸಿ ಇಮ್ತಿಯಾಝ್, ರಿಕ್ಷಾದಲ್ಲಿ ಪ್ರಯಾಣಿಸುತಿದ್ದ ನಾರಾಯಣ ತಂತ್ರಿ ಅವರ ಪತ್ನಿ ಅನಿತಾ ಗಾಯಗೊಂಡಿದ್ದಾರೆ. ನಾರಾಯಣ ತಂತ್ರಿಯವರು ಮಂಗಳೂರಿನಿಂದ ಸಾಂತೂರಿನಲ್ಲಿರುವ ಸಂಬಂಧಿಕರ ಮನೆಗೆಂದು ಪಡುಬಿದ್ರೆಯಿಂದ ರಿಕ್ಷಾದಲ್ಲಿ ತೆರಳಿದ್ದರು. ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.