ಇಸ್ರೇಲ್ ದಾಳಿಯಲ್ಲಿ 8 ಸಿರಿಯ ಸೈನಿಕರು ಹತ

Update: 2018-07-16 18:29 GMT

ಬೈರೂತ್, ಜು. 16: ಉತ್ತರ ಸಿರಿಯದಲ್ಲಿ ರವಿವಾರ ರಾತ್ರಿ ಇಸ್ರೇಲ್ ನಡೆಸಿದೆ ಎನ್ನಲಾದ ವಾಯು ದಾಳಿಯಲ್ಲಿ ಕನಿಷ್ಠ 8 ಸಿರಿಯ ಸರಕಾರಿ ಸೈನಿಕರು ಹತರಾಗಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಸೋಮವಾರ ತಿಳಿಸಿದೆ.

ರವಿವಾರ ತಡರಾತ್ರಿ ಅಲೆಪ್ಪೊ ಪ್ರಾಂತದಲ್ಲಿರುವ ಸೇನಾ ನೆಲೆಯೊಂದರ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ ಎಂದು ಸಿರಿಯದ ಸರಕಾರಿ ಮಾಧ್ಯಮ ಆರೋಪಿಸಿದೆ. ಇಸ್ರೇಲ್ ದಾಳಿ ನಡೆಸಿರುವುದು ಹೌದಾದರೆ, ಇದು ಯುದ್ಧಪೀಡಿತ ದೇಶದ ಉತ್ತರ ಭಾಗದಲ್ಲಿ ಇಸ್ರೇಲ್ ನಡೆಸಿದ ಅತ್ಯಂತ ಅಪರೂಪದ ದಾಳಿಯಾಗಿದೆ.

ಮೃತಪಟ್ಟವರಲ್ಲಿ ಕನಿಷ್ಠ 6 ಸಿರಿಯನ್ನರಿದ್ದಾರೆ ಹಾಗೂ ಈ ನೆಲೆಯಲ್ಲಿ ಇರಾನ್ ಹೋರಾಟಗಾರರೂ ಇದ್ದರು ಎಂದು ವೀಕ್ಷಣಾಲಯ ತಿಳಿಸಿದೆ.

 ಆಯಕಟ್ಟಿನ ವಾಯು ನೆಲೆಯೊಂದರ ಸಮೀಪ ಕ್ಷಿಪಣಿ ದಾಳಿ ನಡೆಯಿತು ಎಂದು ‘ಸನಾ’ ರವಿವಾರ ವರದಿ ಮಾಡಿದೆ. ಆದಾಗ್ಯೂ, ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದಿದೆ.

ಸಿರಿಯದಲ್ಲಿ ತನ್ನ ಬದ್ಧ ವೈರಿ ದೇಶ ಇರಾನ್‌ನ ಸೈನಿಕರು ನೆಲೆಯೂರುವುದನ್ನು ತಾನು ಸಹಿಸುವುದಿಲ್ಲ ಎಂಬುದಾಗಿ ಇಸ್ರೇಲ್ ಪದೇ ಪದೇ ಎಚ್ಚರಿಕೆ ನೀಡುತ್ತಲೇ ಇದ್ದಿದ್ದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News