×
Ad

ವಿದ್ಯಾರ್ಥಿಗಳು ಬೆಳಕಿನ ಕುಡಿಯಾಗಲಿ: ಅಂಬಾತನಯ ಮುದ್ರಾಡಿ

Update: 2018-07-17 18:15 IST

ಹೆಬ್ರಿ, ಜು.17: ಅಜ್ಞಾನವೇ ಕತ್ತಲು, ಜ್ಞಾನವೇ ಬೆಳಕು. ವಿದ್ಯಾರ್ಥಿಗಳು ಬೆಳಕಿನ ಕುಡಿಯಾಗಬೇಕೇ ಹೊರತು ಬೆಂಕಿಯ ಕಿಡಿಯಾಗಬಾರದು ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದ್ದಾರೆ.

ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಆಶ್ರಯದಲ್ಲಿ ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತ ಹೆಬ್ರಿ ಉದಯಕುಮಾರ್ ಶೆಟ್ಟಿ ಸಂಪಾದಕ ಪ್ರಕಾಶನದ ಸುಜ್ಞಾನ ದೀಪ್ತಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸುಜ್ಞಾನ ದೀಪ್ತಿ ಪುಸ್ತಕವನ್ನು ಬಿಡುಗಡೆಗೊಳಿಸಿದ ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ದಿವಾಕರ ಎಸ್.ಮರಕಾಲ ಮಾತನಾಡಿ ಪ್ರತಿ ಯೊಬ್ಬ ವ್ಯಕ್ತಿಯ ಜೀವನವನ್ನು ಪರಿಪೂರ್ಣವಾಗಿರುವುದರ ಜೊತೆಗೆ ಸವಾಲು ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿ, ಸಮಾಜದಲ್ಲಿ ಗೌರಯುತವಾಗಿ ಕಲಿಸುವ ಬದುಕಿನ ಬಗೆಗಿ ಪಾಠವೇ ಬದುಕು ಶಿಕ್ಷಣ ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಸುಧಾ ವೈ.ಎಂ. ವಹಿಸಿದ್ದರು. ಹರಿದಾಸ ಬಿ.ಸಿ.ರಾವ್ ಶಿವಪುರ, ಉದಯವಾಣಿ ಹಿರಿಯ ಉಪಸಂಪಾದಕ ಗಣೇಶ್ ಕುಳಮರ್ವ ಮಾತನಾಡಿದರು. ಕನ್ನಡ ಪತ್ರಿಕೆಗಳ ಕುರಿತ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾಥಿಗರ್ಳಿಗೆ ಬಹುಮಾನ ವಿತರಿಸಲಾಯಿತು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ,ಮೈಟೆಕ್ ಸಮೂಹ ಶಿಕ್ಷಣ ಸಂಸ್ಥೆ ಯ ಅಧ್ಯಕ್ಷ ಉದಯ ಆಚಾರ್ಯ ಪಳ್ಳಿ, ಶಾಲಾ ಸಾಹಿತ್ಯ ಸಂಘದ ಅಧ್ಯಕ್ಷ ಗಣೇಶ ಕಿಣಿ, ಚಾಣಕ್ಯ ಟ್ಯೂಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು.

ಪತ್ರಕರ್ತ ಹೆಬ್ರಿ ಉದಯಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ಆಂಗ್ಲ ಭಾಷಾ ಶಿಕ್ಷಕ ಪ್ರಕಾಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶಶಿಧರ ಶೆಟ್ಟಿ ವಂದಿಸಿದರು. ಬಳಿಕ ಚಾಣಕ್ಯ ಇನ್ಸಿಟ್ಯೂಟ್ ಆ್ ಮ್ಯುಸಿಕ್ ಹೆಬ್ರಿ ಹಾಗೂ ಬಿಟ್ಸ್ ಇನ್ಸಿಟ್ಯೂಟ್ ಆ್ ಮ್ಯುಸಿಕ್ ಉಡುಪಿ ಇವರಿಂದ ಟ್ರ್ಯಾಕ್ ಸಂಗೀ ಗಾಯನ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News