ಕೊಡವೂರು ದೇವಸ್ಥಾನದ ಅಗ್ರಹಾರ ರಸ್ತೆ ಉದ್ಘಾಟನೆ
Update: 2018-07-17 18:56 IST
ಮಲ್ಪೆ, ಜು.17: ಉಡುಪಿ ನಗರಸಭೆಯ ನಿಧಿಯಿಂದ 9.80ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನ ಮುಂಭಾಗದ ಅಗ್ರಹಾರ ರಸ್ತೆಯ ಕಾಂಕ್ರೀಟೀಕರಣ ಹಾಗೂ ಎರಡು ಬದಿ ಗಳಿಗೆ ಇಂಟರ್‌ಲಾಕ್ ಕಾಮಗಾರಿಯ ಉದ್ಘಾಟನೆ ಸೋಮವಾರ ಜರಗಿತು.
ಕಾಮಗಾರಿಯನ್ನು ಹಿರಿಯ ಸಾಮಾಜಿಕ ಮುಂದಾಳು ಶಿವಪ್ಪಕಾಂಚನ್ ಉದ್ಘಾಟಿಸಿದರು. ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್ ರಾಜ್, ಸದಸ್ಯರಾದ ರಮೇಶ್ ಕಾಂಚನ್, ನಾರಾಯಣ ಪಿ.ಕುಂದರ್, ಹಸನ್ ಸಾಬ್, ಗಣೇಶ್ ನೆರ್ಗಿ, ಅಭಿಯಂತರ ರಾಜಶೇಖರ್, ಕೊಡವೂರು ದೇವ ಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಸದಸ್ಯರಾದ ಜನಾರ್ದನ್ ಕೊಡವೂರು, ಕೃಷ್ಣಮೂರ್ತಿ ಭಟ್, ಭಾಸ್ಕರ್ ಪಾಲನ್, ಕೆ. ಬಾಬ, ಬೇಬಿ ಮೆಂಡನ್, ಎ.ರಾಜ ಸೇರಿಗಾರ, ಕೊಡವೂರು ಸಿ.ಎ.ಬ್ಯಾಂಕ್ ಅಧ್ಯಕ್ಷ ನಾರಾಯಣ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.