ಬಂಟ್ವಾಳ: ವನಮಹೋತ್ಸವ-ಸಸಿ ವಿತರಣೆ ಕಾರ್ಯಕ್ರಮ
ಬಂಟ್ವಾಳ, ಜು. 17: ಜಿಲ್ಲಾ ಪಂಚಾಯತ್, ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು ಹಾಗೂ ಬಂಟ್ವಾಳ ಇದರ ವತಿಯಿಂದ "ವನಮಹೋತ್ಸವ-ಸಸಿ ವಿತರಣೆ ಕಾರ್ಯಕ್ರಮ" ವಗ್ಗ ಕಾವಳಪಡೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ನಡೆಯಿತು.
ಶಾಸಕ ರಾಜೇಶ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವಚ್ಛ ಪರಿಸರ ಮುಂದಿನ ಪೀಳಿಗೆಯ ಆಸ್ತಿಯಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಪರಿಸರದ ಕುರಿತು ಹೆಚ್ಚು ಕಾಳಜಿ ಮೂಡಿಸುವ ಪ್ರಯತ್ನಗಳು ಆರಂಭವಾಗಬೇಕು. ವನಮಹೋತ್ಸವ ನಿತ್ಯದ ಕಾರ್ಯಕ್ರಮವಾಗಲಿ ಎಂದರು.
ವೇದಿಕೆಯಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯ ಪದ್ಮಶೇಖರ್ ಜೈನ್, ಸಾಮಾಜಿಕ ಅರಣ್ಯ ಮಂಗಳೂರು ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಶ್ರೀನಿವಾಸಮೂರ್ತಿ, ಕಾವಳಪಡೂರು ಗ್ರಾಪಂ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾವಳಪಡೂರು ಗ್ರಾಪಂ ಭವಾನಿ ಎಂ., ಶಾಲಾ ಪೋಷಕ ಸಮಿತಿ ಸದಸ್ಯ ಪಿ.ಜಿನರಾಜ್ ಮತ್ತಿತರರು ಉಪಸ್ಥಿತರಿದ್ದರು.
ವಸತಿ ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ ಕುಮಾರ್ ಸ್ವಾಗತಿಸಿ, ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ವಂದಿಸಿದರು. ರಶ್ಮಿ ರಾಜೇಶ್ ಬಳಿಗಾರ್ ಕಾರ್ಯಕ್ರಮ ನಿರೂಪಿಸಿದರು.