×
Ad

ಮುಸ್ಲಿಮರೊಂದಿಗೆ ಮಾತಾಡಿ !

Update: 2018-07-17 21:16 IST

ಹೊಸದಿಲ್ಲಿ, ಜು.17: ಜಗತ್ತಿನ ಕೆಲವೆಡೆ ಧರ್ಮಗಳ ನಡುವೆ ಸಂಘರ್ಷಗಳು ಹೆಚ್ಚುತ್ತಿರುವಂತೆಯೇ ಭಾರತದಲ್ಲಿ ಟ್ವಿಟರ್ ಮೂಲಕ ಧರ್ಮಗಳನ್ನು ಒಗ್ಗೂಡಿಸುವ ವಿಶಿಷ್ಟ ಪ್ರಯತ್ನವೊಂದು ನಡೆಯುತ್ತಿದೆ.

ಮಂಗಳವಾರ ಟ್ವಿಟರ್ ನಲ್ಲಿ Talk to a Muslim ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ. ಮುಸ್ಲಿಮರ ಬಗ್ಗೆ ಇರುವ ಪೂರ್ವಾಗ್ರಹಪೀಡಿತ ಆಲೋಚನೆಗಳನ್ನು ಹೋಗಲಾಡಿಸುವುದೇ ಇದರ ಉದ್ದೇಶವಾಗಿದೆ. ಬಾಲಿವುಡ್ ನಟಿ ಸ್ವರಾ ಭಾಸ್ಕರ್, ಗೌಹರ್ ಖಾನ್, ರಾಣಾ ಸಫ್ವಿ ಮುಂತಾದವರು ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. "#ಪ್ರೀತಿ, ಶಾಂತಿಗಾಗಿ ಭಾರತ... #TalkToAMuslim ಎಂದು ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದಾರೆ.

"ನಾನು ಭಾರತೀಯ ಮುಸ್ಲಿಂ, ನಾನು ಜೀವನವನ್ನು ಅನುಭವಿಸುತ್ತೇನೆ. ನಾನು ಶೇಕ್ಸ್ ಪಿಯರ್, ಗಾಲಿಬ್, ಮೀರಾಬಾಯಿ, ಮುಘಲರ ಬಗ್ಗೆ ಹಾಗು ಭಾರತದ ಸ್ವಾತಂತ್ರ್ಯದ ಪ್ರಥಮ ಸಂಗ್ರಾಮದ ಬಗ್ಗೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಸ್ಲಿಮರ ಕೊಡುಗೆಗಳ ಬಗ್ಗೆ ಮಾತನಾಡಬಲ್ಲೆ, ಬನ್ನಿ ನನ್ನೊಂದಿಗೆ ಮಾತನಾಡಿ #TalkToAMuslim" ಎಂದು ರಾಣಾ ಸಫ್ವಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News