ಮಾಜಿ ಪೊಲೀಸ್ ಅಧಿಕಾರಿಗಳ ಬಿಡುಗಡೆ ಅರ್ಜಿಗೆ ಇಶ್ರತ್ ಜಹಾನ್ ತಾಯಿಯಿಂದ ಆಕ್ಷೇಪ ಸಲ್ಲಿಕೆ

Update: 2018-07-17 15:50 GMT

ಅಹ್ಮದಾಬಾದ್, ಜು. 17: 2004ರಲ್ಲಿ ನಡೆದ ಇಸ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದ ಆರೋಪಿಗಳಾದ ಇಬ್ಬರು ನಿವೃತ್ತ ಪೊಲೀಸ್ ಅಧಿಕಾರಿಗಳ ಬಿಡುಗಡೆ ಕೋರಿ ಸಲ್ಲಿಸಿದ ಅರ್ಜಿ ಆಕ್ಷೇಪಿಸಿ ಇಶ್ರತ್ ಜಹಾನ್ ಅವರ ತಾಯಿ ಗುರುವಾರ ಮನವಿ ಸಲ್ಲಿಸಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿಗಳ ಬಿಡುಗಡೆ ವಿರೋಧಿಸಿ ಶಮೀಮಾ ಕೌಸರ್ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ.

 ಸಿಬಿಐ ಹಾಗೂ ಇಬ್ಬರು ಆರೋಪಿಗಳ ವಾದಗಳನ್ನು ಆಲಿಸಿದ ಬಳಿಕ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಜೆ.ಕೆ. ಪಾಂಡ್ಯ ಮಂಗಳವಾರ ಆದೇಶ ಕಾಯ್ದಿರಿಸಿದರು ಹಾಗೂ ಸಂತ್ರಸ್ತರ ಕಡೆಯಿಂದ ಎತ್ತಿದೆ ಆಕ್ಷೇಪದ ಬೆಳಕಿನಲ್ಲಿ ಈ ಪ್ರಕರಣದ ಇನ್ನಷ್ಟು ವಿಚಾರಣೆ ನಡೆಸಲಾಗುವುದು ಎಂದರು.

ನ್ಯಾಯವಾದಿ ಪಿ.ಐ ಪರ್ವೇಝ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಕೌಸರ್, ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಬಲ ಸಾಕ್ಷಿ ಇದೆ ಎಂದು ಹೇಳಿದ್ದಾರೆ.

 2004ರಲ್ಲಿ ಅಹ್ಮದಾಬಾದ್‌ನ ಹೊರವಲಯದಲ್ಲಿ ಪೊಲೀಸರು ಇಶ್ರತ್ ಜಹಾನ್ ಹಾಗೂ ಇತರರನ್ನು ಗುಂಡು ಹಾರಿಸಿ ಹತ್ಯೆ ನಡೆಸಿದ ಸಂದರ್ಭ ಅಲ್ಲಿ ಈ ಇಬ್ಬರು ಅಧಿಕಾರಿಗಳು ಇದ್ದರು ಎಂಬುದಕ್ಕೆ ದಾಖಲಾದ ಸಾಕ್ಷಿ ಇದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News