ಜಪಾನ್: ತೀವ್ರ ಉಷ್ಣ ಮಾರುತಕ್ಕೆ 14 ಬಲಿ

Update: 2018-07-17 18:12 GMT

ಟೋಕಿಯೊ, ಜು. 17: ಜಪಾನ್‌ನಲ್ಲಿ ಮೂರು ದಿನಗಳ ಕಾಲ ಬೀಸಿದ ಉಷ್ಣ ಮಾರುತದಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ಅದೇ ವೇಳೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ರಕ್ಷಣಾ ಕಾರ್ಯಾಚರಣೆಗೂ ತೀವ್ರ ಉಷ್ಣತೆ ಅಡಚಣೆಯುಂಟು ಮಾಡಿದೆ. ಕಳೆದ ವಾರ ಸಂಭವಿಸಿದ ಭೀಕರ ಪ್ರವಾಹದಲ್ಲಿ ಜಪಾನ್‌ನಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಸೋಮವಾರ ದಿನದ ಉಷ್ಣತೆಯು ಕೆಲವು ಒಳ ಪ್ರದೇಶಗಳಲ್ಲಿ 39 ಡಿಗ್ರಿ ಸೆಲ್ಸಿಯಸ್ ದಾಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News