×
Ad

ಹೆಜಮಾಡಿಗೆ ಹೊಸತಂತ್ರಜ್ಞಾನದಲ್ಲಿ ಮೀನುಗಾರಿಕಾ ಜಟ್ಟಿ

Update: 2018-07-18 14:33 IST

ಪಡುಬಿದ್ರೆ, ಜು. 18: ಹೆಜಮಾಡಿಯಲ್ಲಿ ಹೊಸತಂತ್ರಜ್ಞಾನದಲ್ಲಿ ಮೀನುಗಾರಿಕಾ ಜಟ್ಟಿ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡೇಗೌಡ ಹೇಳಿದರು.

ಬುಧವಾರ ಹೆಜಮಾಡಿಯ ಮೀನುಗಾರಿಕಾ ಬಂದರು ವೀಕ್ಷಣೆಗೆ ಭೇಟಿ ನೀಡಿದ ಅವರು, ಹೊಸ ತಂತ್ರಜ್ಞಾನ ವಿದೇಶಗಳಲ್ಲಿ ಪ್ರಸಿದ್ಧಿಯಾಗಿದೆ. ಗೋವಾದಲ್ಲೂ ಈ ಯೋಜನೆಯನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ತಜ್ಞರ ಸಮಿತಿಯೊಂದನ್ನು ಗೋವಾಕ್ಕೆ ಕಳುಹಿಸಲಾಗುವುದು ಎಂದರು.

ಹೆಜಮಾಡಿ ಬಂದರು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಶೇ. 50ರಷ್ಟು ಅನುದಾನವನ್ನು ನೀಡಲು ಮುಂದಾಗಿದ್ದು, ರಾಜ್ಯ ಸರ್ಕಾರ ಶೇ. 50ರಷ್ಟು ಅನುದಾನದಲ್ಲಿ ಯೋಜನೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಶಾಸಕ ಲಾಲಾಜಿ ಮೆಂಡನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಲಾಜಿ, ಮೀನುಗಾರ ಮುಖಂಡ ವಿಜಯ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News