×
Ad

ಬ್ರಾಹ್ಮಣ ಮಹಾಸಭಾದಿಂದ ಸಮುದಾಯ ಭವನ ಸ್ಥಾಪನೆ: ಚಾತ್ರ

Update: 2018-07-18 20:19 IST

ಉಡುಪಿ, ಜು.18: ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಜಿಲ್ಲಾ ಕೇಂದ್ರ ವಾಗಿರುವ ಉಡುಪಿಯಲ್ಲಿ ಸಮುದಾಯ ಭವನವನ್ನು ಸ್ಥಾಪಿಸುವ ಬಗ್ಗೆ ಯೋಜನೆ ಹಾಕಿಕೊಂಡಿದ್ದು, ಈ ಮೂಲಕ ಸಮುದಾಯದ ಸದಸ್ಯರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಮಹಾಸಭಾದ ಅದ್ಯಕ್ಷ ಕೃಷ್ಣಾನಂದ ಚಾತ್ರ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ಸಹಾಯ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಾ ದ್ಯಂತ ಬ್ರಾಹ್ಮಣ ವಲಯ ಹಾಗೂ ಸಮುದಾಯದ ಸಾಂಘಿಕ ಸಂಸ್ಥೆಗಳನ್ನು ಭೇಟಿ ಮಾಡಿ ಜಿಲ್ಲಾ ಸದಸ್ಯರನ್ನಾಗಿ ಮಾಡುವುದು ಮತ್ತು ಪ್ರತಿಯೊಂದು ಕುಟುಂಬದಲ್ಲೂ ಕನಿಷ್ಠ ಒಬ್ಬರನ್ನು ಸದಸ್ಯರನ್ನಾಗಿಸುವುದು ಮಹಾಸಭಾದ ಗುರಿಯಾಗಿದೆ ಎಂದರು.

ರಾಜ್ಯ ಸರಕಾರ ಬಜೆಟ್‌ನಲ್ಲಿ ಘೋಷಿಸಿರುವ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆ ಹಾಗೂ ಆರ್ಥಿಕ ಸಹಕಾರ ನೀಡುವ ಯೋಜನೆ ಸ್ವಾಗತಾರ್ಹ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಗಾಯತ್ರಿ ಮಂತ್ರವನ್ನು ಪಠಿಸಿ ಬರವಣಿಗೆ ಮೂಲಕ ಸುಮಾರು ಎರಡು ಕೋಟಿ ಜಪವನ್ನು ದೇವಿಗೆ ಸಮರ್ಪಿಸುವ ಅಭಿಯಾನವನ್ನು ಸದ್ಯದಲ್ಲೇ ಪ್ರಾರಂಭಿಸಲಿದ್ದು, ಇದರ ಸಮಾ ರೋಪವನ್ನು ಕುಂದಾಪುರದಲ್ಲಿ 2019ರ ಡಿಸೆಂಬರ್ ತಿಂಗಳ ಕೊನೆಯ ವಾರ ದಲ್ಲಿ ನಡೆಸುವ ರಾಜ್ಯಮಟ್ಟದ ಸಮಾವೇಶದಲ್ಲಿ ಆಯೋಜಿಸಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಗಣೇಶ್ ರಾವ್, ಜಿಲ್ಲಾ ಸಂಚಾಲಕ ಬಿ.ವಿ.ಲಕ್ಷ್ಮೀನಾರಾಯಣ, ಜಿಲ್ಲಾ ಕೇಂದ್ರೀಯ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯಾಯ, ವಾಸುದೇವ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News