ಮುಲ್ಕಿ ಕಾರ್ನಾಡ್ ನಲ್ಲಿ ಮಹಿಳಾ ಶರೀಹತ್ ಕಾಲೇಜು ಪುನಃರಾರಂಭ

Update: 2018-07-18 15:14 GMT

ಮುಲ್ಕಿ, ಜು. 18: ಇಲ್ಲಿನ ಕಾರ್ನಾಡ್ ಮದ್ರಸತ್ತುನ್ನೂರ್ ನಲ್ಲಿ ಕಳೆದ ವರ್ಷ ಉದ್ಘಾಟನೆಗೊಂಡ ಮಹಿಳಾ ಶರೀಹತ್ ಕಾಲೇಜ್ ರಮಝಾನ್ ಬಳಿಕ ಇದೀಗ ಪುನರಾರಂಭ ಗೊಂಡಿದ್ದು ಜಮಾತ್ ಕಾರ್ಯದರ್ಶಿ ಲಿಯಾಕತ್ ಅಲಿ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಮಸೀದಿಯ ಖತೀಬ್ ಹಾಜಿ ಯಸ್ ಬಿ ದಾರಿಮಿ ತರಗತಿಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರ್ನಾಡ್ ಖತೀಬ್ ಹಾಜಿ ಇಸ್ಮಾಯಿಲ್ ದಾರಿಮಿ ಮಾತನಾಡಿದರು. 

ಅದ್ಯಕ್ಷ ಭಾಷಣ  ಮಾಡಿದ ಲಿಯಾಕತ್ ಅಲಿ ಪರಿಸರದ ವಿಧ್ಯಾಸಕ್ತ ಮಹಿಳೆಯರಿಗೆ ಇದೊಂದು ಸುವರ್ಣಾವಕಾಶವಾಗಿದ್ದು ಕಲಿಯಲು ಇಚ್ವಿಸುವ ಮಹಿಳೆಯರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಮಾಡಿಕೊಡಲು ಜಮಾಅತ್ ಸಮಿತಿ ಬದ್ಧವಾಗಿದೆಯಲ್ಲದೆ ಎಲ್ಲಾ ವಯೋಮಿತಿಯ ಮಹಿಳೆಯರಿಗೂ ಈ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು ಎಂದರು.

ಶಾಫಿ ಮುಸ್ಲಿಯಾರ್ ಸವಣೂರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಫಾರೂಕ್ ಹಾಜಿ, ಹಸೈನಾರ್, ಹನೀಪ್, ಅಮೀರ್ ಮೊದಲಾದ ಅನೇಕ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News