×
Ad

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಮೂವರು ಸಾಕ್ಷಿಗಳ ವಿಚಾರಣೆ

Update: 2018-07-18 21:37 IST

ಉಡುಪಿ, ಜು.18: ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಾಕ್ಷಿಗಳ ವಿಚಾರಣೆಯು ಇಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ನಡೆಯಿತು.

ಭಾಸ್ಕರ್ ಶೆಟ್ಟಿ ಅವರ ವಿಲ್ ಬರೆದ ವಕೀಲ ವಿನಯ ಆಚಾರ್, ಆರೋಪಿ ಗಳಾದ ರಾಜೇಶ್ವರಿ ಶೆಟ್ಟಿ ಹಾಗೂ ನಿರಂಜನ್ ಭಟ್ ಅವರನ್ನು ಗುರುತು ಹಚ್ಚಿದ್ದ ಪಡುಬಿದ್ರೆಯ ಮಂಜುನಾಥಯ್ಯ, ಭಾಸ್ಕರ್ ಶೆಟ್ಟಿಯನ್ನು ಕೊನೆಯ ಬಾರಿಗೆ ಅವರ ಮನೆಯಲ್ಲಿ ನೋಡಿದ ಗೆಳೆಯ ಶಿವಾನಂದ ಅವರ ಮುಖ್ಯ ವಿಚಾರಣೆ ಯನ್ನು ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ಹಾಗೂ ಪಾಟೀ ಸವಾಲನ್ನು ಆರೋಪಿಗಳ ಪರ ವಕೀಲರಾದ ನಾರಾಯಣ ಪೂಜಾರಿ, ಅರುಣ್ ಬಂಗೇರ, ವಿಕ್ರಂ ಹೆಗ್ಡೆ ನಡೆಸಿದರು.

ಇತರ ಸಾಕ್ಷಿಗಳ ವಿಚಾರಣೆಯು ಮುಂದುವರೆಯಲಿದೆ. ಮಂಗಳೂರಿನ ಜೈಲಿನಲ್ಲಿದ್ದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಅವರನ್ನು ಇಂದು ಕೂಡ ಬಿಗಿ ಭದ್ರತೆಯಲ್ಲಿ ವಿಚಾರಣೆಯ ಸಂದರ್ಭ ನ್ಯಾಯಾಲಯಕ್ಕೆ ಹಾಜರುಪಡಿಸಿ, ಸಂಜೆ ಮಂಗ ಳೂರು ಜೈಲಿಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ ಸಾಕ್ಷಿ ನಾಶ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News