×
Ad

ಮಂಗಳೂರು: ಮೆಡಿಕಲ್ ಶಾಪ್ ಮೇಲೆ ಪೊಲೀಸರ ದಾಳಿ

Update: 2018-07-18 21:44 IST

ಮಂಗಳೂರು, ಜು.18: ಪಿವಿಎಸ್ ಸಮೀಪದ ಹೆಲ್ತ್‌ಕ್ಯೂರ್ ಮೆಡಿಕಲ್ ಶಾಪ್‌ನಲ್ಲಿ ವೈದ್ಯರ ಚೀಟಿ ಇಲ್ಲದೇ ಟ್ಯಾಬ್ಲೆಟ್ ನೀಡುತ್ತಿದ್ದ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ, ನಿಷೇಧಿತ ಔಷಧ ವಶಪಡಿಸಿಕೊಂಡಿದ್ದಾರೆ.

‘ಸ್ಟಾಸ್ಮೊ ಪ್ರೊಕ್ಸಿವೊನ್ ಪ್ಲಸ್’ ಎಂಬ ಹೆಸರಿನ ಟ್ಯಾಬ್ಲೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೇಂದ್ರ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ, ಉರ್ವ ಠಾಣೆ ಮತ್ತು ಪೂರ್ವ ಪೊಲೀಸ್ ಠಾಣಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಮೆಡಿಕಲ್ ಶಾಪ್ ಮಾಲಕರ ವಿರುದ್ಧ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News