ಸ್ವಾಮಿ ಅಗ್ನಿವೇಶ್ ಮೇಲಿನ ದಾಳಿ ಖಂಡಿಸಿ ರಾಹುಲ್‌ರಿಂದ ‘ಪಾಪ್ ರಸಪ್ರಶ್ನೆ’

Update: 2018-07-18 16:34 GMT

ಮುಂಬೈ, ಜು.18: ಹಿಂದು ವಿರೋಧಿ ನಿಲುವು ಹೊಂದಿದ್ದಾರೆ ಎಂದು ಆರೋಪಿಸಿ ಸ್ವಾಮಿ ಅಗ್ನಿವೇಶ್ ಮೇಲೆ ಜಾರ್ಖಂಡ್‌ನಲ್ಲಿ ಮಂಗಳವಾರ ಬಿಜೆಪಿ ಯುವಮೋರ್ಚಾದ ಕಾರ್ಯಕರ್ತರು ನಡೆಸಿರುವ ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟ್ವಿಟರ್‌ನಲ್ಲಿ ‘ಪಾಪ್ ರಸಪ್ರಶ್ನೆ’ ಪೋಸ್ಟ್ ಮಾಡಿದ್ದಾರೆ.

ರಸಪ್ರಶ್ನೆಯೊಂದನ್ನು ಪೋಸ್ಟ್ ಮಾಡಿ ಅದಕ್ಕೆ ಅಗ್ನಿವೇಶ್ ಮೇಲಿನ ಹಲ್ಲೆಯ ವರದಿಯನ್ನು ಅಟ್ಯಾಚ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ಟ್ವೀಟ್‌ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. “ಸಾಲಿನಲ್ಲಿರುವ ಅತ್ಯಂತ ಬಲಿಷ್ಟರಿಗೆ ನಾನು ತಲೆಬಾಗುತ್ತೇನೆ. ವ್ಯಕ್ತಿಯೊಬ್ಬನ ಬಲ ಮತ್ತು ಅಧಿಕಾರ ಮಾತ್ರ ನನಗೆ ಮುಖ್ಯವಾಗಿದೆ. ಅಧಿಕಾರ ಶ್ರೇಣಿಯನ್ನು ಉಳಿಸಿಕೊಳ್ಳಲು ನಾನು ದ್ವೇಷಭಾವನೆ ಹಾಗೂ ಭಯವನ್ನು ಬಳಸುತ್ತಿದ್ದೇನೆ- ನಾನು ಯಾರು?” ಎಂಬ ರಸಪ್ರಶ್ನೆಯನ್ನು ರಾಹುಲ್ ಪೋಸ್ಟ್ ಮಾಡಿ, ಅದಕ್ಕೆ ಸ್ವಾಮಿ ಅಗ್ನಿವೇಶ್ ಮೇಲೆ ನಡೆದ ದಾಳಿಯ ಕುರಿತ ವರದಿಯನ್ನು ಅಟ್ಯಾಚ್ ಮಾಡಿದ್ದಾರೆ. ಇದಕ್ಕೆ ಹಲವರು ಮೆಚ್ಚುಗೆ ಸೂಚಿಸಿದರೆ ಇನ್ನು ಕೆಲವರು ಈ ಟ್ವೀಟ್ ಅನ್ನು ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್‌ಗೇ ಅನ್ವಯಿಸಿ ಪ್ರತಿ ಟ್ವೀಟ್ ಮಾಡಿದ್ಧಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News