×
Ad

ಬೈಕ್‌ಗೆ ಟ್ಯಾಂಕರ್ ಢಿಕ್ಕಿ: ಇಬ್ಬರಿಗೆ ಗಾಯ

Update: 2018-07-18 22:14 IST

ಮಂಗಳೂರು, ಜು.18: ಕುಳಾಯಿಂದ ಕೈಕಂಬ ಕಡೆ ಹೋಗುತಿದ್ದ ಬೈಕ್‌ಗೆ ಟ್ಯಾಂಕರ್‌ವೊಂದು ಢಿಕ್ಕಿ ಹೊಡೆದು ಬೈಕ್‌ನ ಸವಾರ ಮತ್ತು ಸಹಸವಾರ ಗಾಯಗೊಂಡ ಘಟನೆ ಕೈಕಂಬ ಸಮುದಾಯ ಭವನದ ಬಳಿ ಬುಧವಾರ ನಡೆದಿದೆ.

ಮಂಗಳೂರು ನಿವಾಸಿಗಳಾದ ಸವಾರ ರಾಬರ್ಟ್ ರೊಡ್ರಿಗಸ್, ಸಹಸವಾರ ಬೆಂಜಮಿನ್ ಮೊಂತೆರೊ ಗಾಯಗೊಂಡವರು ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿ ವಾಹನ ಸವಾರ ಹಾಗೂ ಸಹಸವಾರರಿಬ್ಬರು ಕುಳಾಯಿಂದ ಕೈಕಂಬ ಕಡೆ ಬರುತ್ತಿದ್ದರು. ಈ ವೇಳೆ ಸುರತ್ಕಲ್ ಕಡೆಗೆ ಟ್ಯಾಂಕರ್‌ನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಚಾಲಕ ಸಂಶೀರ್ ಅಹ್ಮದ್ ನಿರ್ಲಕ್ಷತನದಿಂದ ವಾಹನ ಚಲಾಯಿಸಿರುವುದು ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಕುತ್ತೆತ್ತೂರಿ ನಿವಾಸಿ ವಿಲ್ಪ್ರೆಡ್ ಫೆರ್ನಾಂಡಿಸ್ ನೀಡಿರುವ ದೂರಿನಂತೆ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News