×
Ad

ಅಪಘಾತ: ಕಾರು ಮಗುಚಿ ಚಾಲಕನಿಗೆ ಗಾಯ

Update: 2018-07-18 23:01 IST

ಮಂಗಳೂರು, ಜು.18: ಮರೋಳಿಯ ಕೆನರಾ ವರ್ಕ್ ಶಾಪ್ ಎದುರು ತೆರೆದ ಡಿವೈಡರ್‌ನಲ್ಲಿ ಯು-ಟರ್ನ್ ಮಾಡುತ್ತಿದ್ದ ಕಾರಿಗೆ ಮೀನು ಸಾಗಾಟದ ಕಂಟೈನರ್ ಢಿಕ್ಕಿ ಹೊಡೆದ ಪರಿಣಾಮ ಕಾರು ಮಗುಚಿ ಬಿದ್ದು, ಚಾಲಕ ಗಾಯಗೊಂಡ ಘಟನೆ ಬುಧವಾರ  ನಡೆದಿದೆ.

ಕುಂದಾಪುರದ ಗಂಗೊಳ್ಳಿ ನಿವಾಸಿ ಮುಹಮ್ಮದ್ ಸತ್ತಾರ್ ಗಾಯಗೊಂಡವರು ಎಂದು ತಿಳಿದುಬಂದಿದೆ. ಬೆಂಗಳೂರಿಗೆ ತೆರಳಲು ಉದ್ದೇಶಿಸಿದ್ದ ಗಾಯಾಳು ಮುಹಮ್ಮದ್ ಸತ್ತಾರ್ ತನ್ನ ಕಾರಿನಲ್ಲಿ ಮರೋಳಿಯಲ್ಲಿನ ಸ್ನೇಹಿತನನ್ನು ಕರೆದುಕೊಂಡು ಬರಲು ಆತನ ಮನೆಗೆ ಹೋಗುತ್ತಿದ್ದರು. ಮರೋಳಿಯ ಕೆನರಾ ವರ್ಕ್ ಶಾಪ್‌ನ ಎದುರು ತೆರೆದ ಡಿವೈಡರ್‌ನಲ್ಲಿ ಬಲಬದಿಗೆ ಯು-ಟರ್ನ್ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಈ ಕುರಿತು ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News