ದೇಶದಲ್ಲಿರುವ ಹಿಂದೂ, ಸಿಖ್ಖರು ಮೂಲ ನಿವಾಸಿಗಳು: ಅಮೆರಿಕಕ್ಕೆ ಅಫ್ಘಾನ್ ರಾಯಭಾರಿ

Update: 2018-07-18 18:17 GMT

 ವಾಶಿಂಗ್ಟನ್, ಜು. 18: ಅಫ್ಘಾನಿಸ್ತಾನದಲ್ಲಿರುವ ಹಿಂದೂಗಳು ಮತ್ತು ಸಿಖ್ಖರು ದೇಶದ ಮೂಲ ನಿವಾಸಿಗಳು, ಅವರು ಭಾರತದಿಂದ ವಲಸೆ ಬಂದವರಲ್ಲ ಎಂದು ಅಮೆರಿಕಕ್ಕೆ ಅಫ್ಘಾನಿಸ್ತಾನದ ರಾಯಭಾರಿ ಹಮ್ದುಲ್ಲಾ ಮೊಹಿಬ್ ಹೇಳಿದ್ದಾರೆ.

ಇತ್ತೀಚೆಗೆ ಅಫ್ಘಾನಿಸ್ತಾನದ ಜಲಾಲಾಬಾದ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಲ್ಲಿ ಏರ್ಪಡಿಸಲಾದ ಸಮಾರಂಭವೊಂದರಲ್ಲಿ ಅವರು ಮಾತನಾಡುತ್ತಿದ್ದರು.

ಜಲಾಲಾಬಾದ್‌ಗೆ ಭೇಟಿ ನೀಡಿದ್ದ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿಯನ್ನು ಭೇಟಿ ಮಾಡಲು ಹೋಗಿದ್ದ ಸಿಖ್ಖರು ಮತ್ತು ಹಿಂದೂಗಳು ಗುಂಪೊಂದರ ಮೇಲೆ ಜುಲೈ 1ರಂದು ನಡೆದ ದಾಳಿಯಲ್ಲಿ ಕನಿಷ್ಠ 19 ಮಂದಿ ಮೃತಪಟ್ಟಿದ್ದಾರೆ. ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ.

‘‘ಅಲ್ಪಸಂಖ್ಯಾತ ಹಿಂದೂಗಳು ಮತ್ತು ಸಿಖ್ಖರು ಭಾರತದಿಂದ ವಲಸೆ ಬಂದವರು ಎಂಬುದಾಗಿ ಹೆಚ್ಚಿನವರು ಭಾವಿಸಿದ್ದಾರೆ. ಆದರೆ, ವಾಸ್ತವಿಕವಾಗಿ, ಅಫ್ಘಾನಿಸ್ತಾನದ ಹಿಂದೂಗಳು ಮತ್ತು ಸಿಖ್ಖರು ಈ ದೇಶದ ಮೂಲ ನಿವಾಸಿಗಳು’’ ಎಂದು ಅಫ್ಘಾನ್ ರಾಯಭಾರಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News