ಕೋಡಿ ಬ್ಯಾರೀಸ್ ತಾಲೂಕು ಮಟ್ಟದ ಚೆಸ್ ಪಂದ್ಯಾಟ

Update: 2018-07-19 08:35 GMT

ಕುಂದಾಪುರ, ಜು.19: ಕೋಡಿಯ ಹಾಜಿ ಕೆ.ಮೊಹಿದೀನ್ ಬ್ಯಾರಿ ಸ್ಮಾರಕ ಅನುದಾನಿತ ಪ್ರೌಢಶಾಲೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಚೆಸ್ ಪಂದ್ಯಾಟ ಬ್ಯಾರೀಸ್ ಬಿಹೈವ್ ಕನ್‌ವೆನ್ಶನ್ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.

ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಪಂದ್ಯಾವಳಿಯನ್ನು ಉದ್ಘಾಟಿಸಿದರು.

ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಾಧವ ಎಂ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಅಧೀಕ್ಷಕ ಭಾಸ್ಕರ್ ಶೆಟ್ಟಿ ಟಿ. ಮಾತನಾಡಿದರು.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದ್ಯಹಿಕ ಪರಿವೀಕ್ಷಕ ದತ್ತಾತ್ರೇಯ ಮಾತನಾಡಿದರು.

ಚೆಸ್‌ನ ತರಬೇತಿದಾರ ಬಾಬು ಪೂಜಾರಿ ಚೆಸ್ ನೀತಿ ನಿಯಮಗಳ ಬಗ್ಗೆ ಸ್ಪರ್ಧಿಗಳಿಗೆ ವಿವರಿಸಿದರು.

ಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಸದಾರಾಮ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಶಂಕರ ಪೂಜಾರಿ, ಸಂಸ್ಥೆಯ ದೈಹಿಕ ಶಿಕ್ಷಣ ಉಪನ್ಯಾಸಕರಾದ ಪ್ರೀತೇಶ್ ಶೆಟ್ಟಿ , ವಿಖ್ಯಾತ್, ಮೀರಾ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News