ಅಳಪೆ ಪ್ರದೇಶ ಬೀಡಿ ಲೇಬರ್ ಯೂನಿಯನ್‌ನ ಮಹಾಸಭೆ
ಮಂಗಳೂರು, ಜು.19: ಜಪ್ಪಿನಮೊಗರು ಲಯನ್ಸ್ ಸಭಾಂಗಣದಲ್ಲಿ ಅಳಪೆ ಪ್ರದೇಶ ಬೀಡಿ ಲೇಬರ್ ಯೂನಿಯನ್‌ನ 27ನೇ ವಾರ್ಷಿಕ ಮಹಾಸಭೆಯು ಜಯಂತಿ ಶೆಟ್ಟಿಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
2018-19ನೆ ಸಾಲಿಗೆ ಸಂಘದ ಅಧ್ಯಕ್ಷೆಯಾಗಿ ಜಯಂತಿ ಶೆಟ್ಟಿ, ಉಪಾಧ್ಯಕ್ಷರಾಗಿ ಸುಮತಿ ಅಡ್ಯಾರ್, ಜಾನಕಿ ಜಲ್ಲಿಗುಡ್ಡೆ, ಜೆ.ಲೀಲಾ, ಪ್ರಧಾನ ಕಾರ್ಯದರ್ಶಿಯಾಗಿ ಜಯಲಕ್ಷ್ಮಿ ಜೊತೆ ಕಾರ್ಯದರ್ಶಿಗಳಾಗಿ ರೋಣಿ, ಗೀತಾ ನಾಯಕ್, ಕೋಶಾಧಿಕಾರಿಯಾಗಿ ಜೆ.ಬಾಲಕೃಷ್ಣ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು)ನ ಅಧ್ಯಕ್ಷ ವಸಂತ ಆಚಾರಿ ಮಾತನಾಡಿ ಕೇಂದ್ರ ಸರಕಾರದ ಜನರೋಧಿ ನೀತಿಯಿಂದ ದೇಶದ ಲಕ್ಷಾಂತರ ಬೀಡಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರಕಾರ ಪ್ರಕಟಿಸಿದ ಕನಿಷ್ಟ ಮಜೂರಿಯನ್ನು ಬೀಡಿ ಮಾಲಕರು ನೀಡುತ್ತಿಲ್ಲ. ಬೀಡಿ ಕಾರ್ಮಿಕರು ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಸಂಘಟಿತ ಹೋರಾಟ ಮಾಡಬೇಕು ಎಂದು ಕರೆ ನೀಡಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಬೇಬಿ ಸೇನವ ವಂದಿಸಿದರು.