×
Ad

ಶಿರೂರು ಸ್ವಾಮೀಜಿ ನಿಧನ : ಮಂಗಳೂರು ಬಿಷಪ್ ಸಂತಾಪ

Update: 2018-07-19 18:51 IST

ಮಂಗಳೂರು, ಜು.19: ಉಡುಪಿಯ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನಕ್ಕೆ ಮಂಗಳೂರು ಧರ್ಮಪ್ರಾಂತದ ಬಿಷಪ್ ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಮತ್ತು ನಿಯೋಜಿತ ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ಸಂತಾಪ ವ್ಯಕ್ತಪಡಿಸಿದ್ದಾರೆ.

ಜನಸಾಮಾನ್ಯರ ಅಸಾಮಾನ್ಯ ಸ್ವಾಮೀಜಿ ಎಂಬುದಾಗಿ ಜನಪ್ರಿಯರಾಗಿದ್ದ ಅವರು ತಮ್ಮ ಪರ್ಯಾಯದ ಅವಧಿಯಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜದ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದರು. ಶಿರೂರು ಸ್ವಾಮೀಜಿ ಎಲ್ಲ ಸಮುದಾಯಗಳ ಜತೆ ಉತ್ತಮ ಸಂಬಂಧ ಮತ್ತು ಬಾಂಧವ್ಯ ಹೊಂದಿದ್ದು, ಸಾಮಾಜಿಕ ಸೌಹಾರ್ದಕ್ಕೆ ಶ್ರಮಿಸಿದ್ದರು ಎಂದು ಬಿಷಪ್‌ದ್ವಯರು ಸ್ಮರಿಸಿದ್ದಾರೆ ಎಂದು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ.ವಿಕ್ಟರ್ ವಿಜಯ್ ಲೋಬೊ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News