ಮುರುಡೇಶ್ವರ ಲಯನ್ಸ್ ಕ್ಲಬ್ಗೆ 'ಎಕ್ಸಲೆಂಟ್ ಕ್ಲಬ್' ಪುರಸ್ಕಾರ

Update: 2018-07-19 13:40 GMT

ಭಟ್ಕಳ,ಜು.19: ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಗೋವಾ ರಾಜ್ಯಗಳನ್ನೊಳಗೊಂಡ ಲಯನ್ಸ್ ಜಿಲ್ಲೆಯ 110 ಕ್ಲಬ್‍ಗಳ ನಡುವೆ ಭಟ್ಕಳ ತಾಲೂಕಿನ ಮುರುಡೇಶ್ವರದ ಲಯನ್ಸ್ ಕ್ಲಬ್ 'ಎಕ್ಸಲೆಂಟ್ ಕ್ಲಬ್’ ಪುರಸ್ಕಾರಕ್ಕೆ ಭಾಜನವಾಗಿದೆ.

ಗೋವಾದ ಗ್ರೀನ್ ಪಾರ್ಕ್ ಹೊಟೇಲ್‍ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಆದ ಎಮ್.ಜೆ.ಎಫ್ ಲಯನ್ ಸಾಯೀಶ್ ಲಾವಂಡೆ, ರೀನಾ ಲಾವಂಡೆ, ಆಗ್ನೇಲ್ ಅಲ್ಕಾಸೋಸ್, ಶಶಿಂದರ್ ನಾಯರ್, ಗಿರೀಶ ಕುಚಿನಾಡ್‍ರವರು ಪ್ರಶಸ್ತಿ ಪ್ರದಾನ ಮಾಡಿದರು.

ಒಟ್ಟು ಐದು ಪ್ರಶಸ್ತಿಗಳನ್ನು ಮುರ್ಡೇಶ್ವರ ಲಯನ್ಸ್ ಕ್ಲಬ್ ತನ್ನ ಕಳೆದ ವರ್ಷದ ಕಾರ್ಯಚಟುವಟಿಕೆಗಳಿಗೆ ಪಡೆದುಕೊಂಡಿದೆ. 'ಎಕ್ಸಲೆಂಟ್ ಲಯನ್ಸ್ ಕ್ಲಬ್ ಪ್ರಶಸ್ತಿ' ಪಿಲಿಫ್ ಅಲ್ಮೇಡಾರವರಿಗೆ 'ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿ', ಎಮ್.ವಿ ಹೆಗಡೆಯವರಿಗೆ 'ಅತ್ಯುತ್ತಮ ಕ್ವಿಝ್ ಮಾಸ್ಟರ್ ಪ್ರಶಸ್ತಿ” ಸೇವೆಯಲ್ಲಿರುವ ಸೈನಿಕರಿಗೆ ಸನ್ಮಾನಿಸಿದ್ದಕ್ಕೆ “ಬೆಸ್ಟ್ ಸಿಗ್ನೇಚರ್ ಎಕ್ಟಿವಿಟಿ ಅವಾರ್ಡ” ಹಾಗೂ ಅತಿ ಹೆಚ್ಚು ಸದಸ್ಯರನ್ನು ಸೇರ್ಪಡೆಗೊಳಿಸಿದ್ದಕ್ಕೆ “ಹಾಯೆಸ್ಟ್ ಮೆಂಬರ್‍ಶಿಪ್ ಗ್ರೋಥ ಅವಾರ್ಡ” ಗಳನ್ನು ತನ್ನ 2017-18ನೇ ಸಾಲಿನ ಕಾರ್ಯಚಟುವಟಿಕೆಗಳಿಗೆ ಮುರ್ಡೇಶ್ವರ ಲಯನ್ಸ್ ಕ್ಲಬ್ ತನ್ನ ಮುಡಿಗೇರಿಸಿಕೊಂಡಿದೆ. ತನ್ನ ಹತ್ತು ವರ್ಷಗಳ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಕ್ಲಬ್ ಅತಿ ಹೆಚ್ಚು ಪ್ರಶಸ್ತಿ ಪಡೆದುಕೊಂಡಿರುವುದು ಕ್ಲಬ್‍ಗೆ ಸಂದ ಗೌರವವಾಗಿದೆ. 

ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಕ್ಲಬ್‍ನ ನಿಕಟಪೂರ್ವ ಅಧ್ಯಕ್ಷ ಮಂಜುನಾಥ ನಾಯ್ಕ, ನೂತನ ಅಧ್ಯಕ್ಷ ನಾಗರಾಜ ಭಟ್, ಕಾರ್ಯದರ್ಶಿ ನಾಗೇಶ ಮಡಿವಾಳ, ಎಮ್.ವಿ ಹೆಗಡೆ, ಪಿಲಿಫ್ ಅಲ್ಮೇಡಾ, ಡಾ.ಮಂಜುನಾಥ ಶೆಟ್ಟಿ, ಮಂಜುನಾಥ ದೇವಾಡಿಗ, ಸುಬ್ರಾಯ ನಾಯ್ಕ, ಜಯಪ್ರಕಾಶ ಕರ್ಕಿಕರ್ ಹಾಜರಿದ್ದು ಪ್ರಶಸ್ತಿಯನ್ನು ಸ್ವೀಕರಿಸಿದರು. 

ಈ ವರ್ಷವೂ ಕೂಡ ಹೆಚ್ಚಿನ ರಚನಾತ್ಮಕ ಸಮಾಜ ಸೇವೆಗಳ ಮೂಲಕ ಇನ್ನೂ ಹೆಚ್ಚಿನ ಪ್ರಶಸ್ತಿಯನ್ನು ಪಡೆಯುವ ವಿಶ್ವಾಸವನ್ನು ನೂತನ ಅಧ್ಯಕ್ಷರಾದ ನಾಗರಾಜ ಭಟ್ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News