ಮಂಗಳೂರಿನ ಶ್ರೀಅನಘ ಸುಝುಕಿ ಮಳಿಗೆಯಲ್ಲಿ ‘ಸುಝುಕಿ ಬರ್ಗ್‌ಮ್ಯಾನ್’ ಬಿಡುಗಡೆ

Update: 2018-07-19 15:52 GMT

ಮಂಗಳೂರು:ಜು.19:ಭಾರತದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಸುಝುಕಿ ತನ್ನ ಸಂಸ್ಥೆಯ ಪ್ರತಿಷ್ಠಿತ ಸ್ಕೂಟರ್ ‘ಸುಝುಕಿ ಬರ್ಗ್‌ಮ್ಯಾನ್’ ನ್ನು ನಗರದ ಯೆಯ್ಯಾಡಿಯಲ್ಲಿರುವ ಸುಝುಕಿ ಡೀಲರ್ ಶ್ರೀ ಅನಘ ಸುಝುಕಿ ಮಳಿಗೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಬಿಡುಗಡೆಯ ಸಂದರ್ಭದಲ್ಲಿ ಶ್ರೀ ಅನಘ ಸುಜುಕಿ ಸಂಸ್ಥೆಯ ಆಡಳಿತ ನಿರ್ದೇಶಕ ಸಾಂಬ ಶಿವರಾವ್, ನಿರ್ದೇಶಕ ವೆಂಕಟ್‌ಫಣಿ , ಸುಝುಕಿ ಸಂಸ್ಥೆಯ ರಿಜನಲ್ ಮ್ಯಾನೇಜರ್ ಸಂದೀಪ್, ಏರಿಯಾ ಮ್ಯಾನೇಜರ್ ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಥಮ ಗ್ರಾಹಕರಾದ ಗೋವರ್ಧನ್ ನಾಯಕ್,ದೀಪಕ್ ರಾವ್, ಸತೀಶ್, ಜೀವಿಟಾ ರೊಡ್ರಿಗಸ್ ಸಮಾರಂಭದಲ್ಲಿ ಕೇಕ್ ಕತ್ತರಿಸಿ ಶುಭ ಹಾರೈಸಿದರು. ಅವರಿಗೆ ಅತಿಥಿಗಳು ಕೀ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಸ್ಕೂಟರ್ ಮೂಲಕ ಕನ್ಯಾಕುಮಾರಿಯಿಂದ ಲಡಾಕ್ ನ ಕರಾದುಂಗಲ್ ವರೆಗೆ ಸ್ಕೂಟರ್ ಮೂಲಕ ಸಾಹಸ ಯಾತ್ರೆ ಮಾಡಿದ ಗಿರೀಶ್ ಹಾಗೂ ಸೂರಜ್ ಮತ್ತು ಉಡುಪಿಯಿಂದ ಬೈಕ್ ಮೂಲಕ 13,500 ಕಿ.ಮೀ ರೈಡ್ ಮಾಡಿದ ಮಂಗಳೂರಿನ ಸಚಿನ್ ಉಪಸ್ಥಿತರಿದ್ದರು. ಅಭಿಜಿತ್ ಕಾರ್ಯಕ್ರಮ ನಿರೂಪಿಸಿದರು. ಮನ್ವಿತಾ ವಂದಿಸಿದರು.

ನಗರದ ಏರ್ ಪೋರ್ಟ್ ರಸ್ತೆಯ ಯೆಯ್ಯಾಡಿಯಲ್ಲಿರುವ ಶ್ರೀ ಅನಘ ಸುಝುಕಿಯಲ್ಲಿ ವಿಶಾಲ ಪಾರ್ಕಿಂಗ್, ಅತ್ಯಾಧುನಿಕ ಸೇವಾ ವಿಭಾಗವನ್ನು ಹೊಂದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ದ್ವಿಚಕ್ರ ಮಾರಾಟ ಮಾಡಿದೆ. ಸುಝುಕಿ ದ್ವಿಚಕ್ರ ವಾಹನಗಳ ಮಾರಾಟ, ಮಾರಾಟದ ಬಳಿಕ ಗ್ರಾಹಕರಿಗೆ ಸೇವೆ ನೀಡಲು ಸಂಪೂರ್ಣ ಆಧುನಿಕ ಸಲಕರಣೆಗಳನ್ನು ಒಳಗೊಂಡ ಸೇವಾ ಘಟಕ, ಕಂಪನಿಯಿಂದ ತರಬೇತಿ ಪಡೆದ ತಾಂತ್ರಿಕ ಸಿಬ್ಬಂದಿ ವರ್ಗ, ಬಿಡಿಭಾಗಗಳ ವಿಭಾಗವನ್ನು ಹೊಂದಿದೆ. ವಿಶಾಲ ಮಾರಾಟ ಹಾಗೂ ಸೇವಾ ಮಳಿಗೆಯನ್ನು ಹೊಂದಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಗ್ರಾಹಕರ ಮೆಚ್ಚುಗೆ ಪಡೆದಿದೆ.

ಐಶಾರಾಮಿ ವಿನ್ಯಾಸ, ಯುರೋಪಿಯನ್ ಡಿಸೈನ್, ಪ್ರೀಮಿಯಂ ಲುಕ್ ಹಾಗೂ ಆಧುನಿಕ ತಂತ್ರಜ್ಞಾನದಿಂದ ಕೂಡಿರುವ ಈ ಸ್ಕೂಟರ್ ನಲ್ಲಿನ ಸವಾರಿ ಹೊಸ ಅನುಭವ ನೀಡಲಿದೆ. ಎಲ್ಲ ವರ್ಗದ ಮಹಿಳೆ ಹಾಗೂ ಪುರುಷರಿಗೆ ಸೂಕ್ತವಾಗುವ ರೀತಿಯಲ್ಲಿ ಈ ಸ್ಕೂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಸಿಗ್ನೇಚರ್ ಮಸ್ಕುಲರ್ ಡಿಸೈನ್ ಹೊಂದಿರುವ ಈ ಸ್ಕೂಟರ್ ದೊಡ್ಡ ಹಾಗೂ ಶಕ್ತಿಶಾಲಿ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳು, ಹಿಂಭಾಗದಲ್ಲೂ ಎಲ್‍ಇಡಿ ಲೈಟ್‍ಗಳನ್ನು ಅಳವಡಿಸಲಾಗಿದೆ.  ಬಾಡಿ ಮೌಂಟೆಡ್ ವಿಂಡ್ ಸ್ಕ್ರೀನ್ ಅಳವಡಿಸಲಾಗಿದೆ. ಇದು ಸ್ಕೂಟರ್ ಗೆ ಹೊಸ ಲುಕ್ ನೀಡುವುದರೊಂದಿಗೆ ಗಾಳಿಯ ರಭಸ ನಿಯಂತ್ರಿಸಿ ಸುಗಮ ಸಂಚಾರಕ್ಕೆ ಪೂರಕವಾಗಲಿದೆ. 

ಸುಧೀರ್ಘ ಪ್ರಯಾಣಕ್ಕೆ ಪೂರಕವಾಗಿ ಹಾಗೂ ಸವಾರನಿಗೆ ಆರಾಮದಾಯಕವಾಗಿ ಸ್ಕೂಟರ್ ಚಲಾಯಿಸಲು ಪೂರಕವಾಗಿ ಉದ್ದನೆ ಫುಟ್‍ಬೋರ್ಡ್ ಇದೆ. ಇದರಲ್ಲಿ ಅಳವಡಿಸಿರುವ ಮಲ್ಟಿಫಕ್ಷನ್ ಡಿಜಿಟಲ್ ಇನ್‍ಸ್ಟ್ರುಮೆಂಟ್ ಪ್ಯಾನೆಲ್‍ನಲ್ಲಿ ಡಿಜಿಟಲ್ ಕ್ಲಾಕ್, ಫುಯೆಲ್ ಗೇಜ್, ಆಯಿಲ್ ಬದಲಾವಣೆ ಸೂಚಕ, ಡ್ಯುವೆಲ್ ಟ್ರಿಪ್ ಮೀಟರ್ ಇದೆ. ಉದ್ದನೆ ಸೀಟ್ ಅಳವಡಿಸಲಾಗಿದೆ. ಎದುರುಗಡೆ ಬಾಕ್ಸ್ ಅಳವಡಿಸಲಾಗಿದ್ದು, ಇಲ್ಲಿನ ಯುಎಸ್‍ಬಿ ಪಾಯಿಂಟ್‍ನಿಂದ ಮೊಬೈಲ್ ಚಾರ್ಜ್ ಮಾಡಬಹುದಾಗಿದೆ. ಬೆಳೆಬಾಳುವ ಸೊತ್ತುಗಳನ್ನು ಸುರಕ್ಷಿತವಾಗಿ ಇಡಬಹುದಾಗಿದೆ. ಸೀಟ್‍ನ ಕೆಳಭಾಗದಲ್ಲಿ 21.5 ಲೀಟರ್ ಸಾಮರ್ಥ್ಯದ ಸ್ಟೋರೇಜ್ ಸೌಲಭ್ಯ ಕಲ್ಪಿಸಲಾಗಿದೆ.  ಎರಡೂ ಚಕ್ರಗಳಿಗೂ ಸಮಾನ ಬ್ರೇಕಿಂಗ್‍ಗಾಗಿ ಕಂಬೈನ್ಡ್ ಬ್ರೇಕ್ ಸಿಸ್ಟಂ ಅಳವಡಿಸಲಾಗಿದೆ. 124 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಇದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News