ಗಾಂಜಾ ಮಾರಾಟ: ಇಬ್ಬರು ವಶಕ್ಕೆ

Update: 2018-07-19 16:12 GMT

ಮಂಗಳೂರು, ಜು.19: ಮೂಳೂರು ಗ್ರಾಮದ ಗುರುಪುರ ಅಲಾಯಿಗುಡ್ಡೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಜ್ಪೆ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ರಾಜಾಜಿನಗರ ನಿವಾಸಿ ರವಿ ಯಾನೆ ಟಿಕ್ಕಿ ರವಿ(34), ಮೂಳೂರು ಗುರುಪುರ ಸಮೀಪದ ಅಲಾಯುಗುಡ್ಡೆ ನಿವಾಸಿ ಸಂದೀಪ್ ಪೂಜಾರಿ(32) ಎಂಬವರನ್ನು ವಶಕ್ಕೆ ಪಡೆದು, ಐದು ಸಾವಿರ ರೂ. ಮೌಲ್ಯದ 55 ಗ್ರಾಂನಷ್ಟು ಗಾಂಜಾ ಹಾಗೂ 80 ಸಾವಿರ ರೂ. ವೌಲ್ಯದ ಆಲ್ಟೊ ಕಾರು ಮತ್ತು ಸ್ಕೂಟರ್‌ನ್ನು ವಶಕ್ಕೆ ಪಡೆಯಲಾಗಿದೆ.

ಬಜ್ಪೆ ವ್ಯಾಪ್ತಿ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬಂದ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ಆರೋಪಿಗಳನ್ನು ವಿಚಾರಣೆ ನಡೆಸಿದಾಗ ನಾಟೆಕಲ್‌ನ ಮುಹಮ್ಮದ್ ರಫೀಕ್ ಎಂಬಾತನಿಂದ ಪಡೆದುಕೊಂಡಿರುವುದಾಗಿ ತಿಳಿಸಿದ್ದು, ಆತನ ಬಂಧನ ಬಾಕಿಯಿದೆ.

ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಪಣಂಬೂರು ಸಹಾಯಕ ಪೊಲೀಸ್ ಆಯಕ್ತ ರಾಜೇಂದ್ರ ಡಿ.ಎಸ್. ಮಾರ್ಗದರ್ಶನದಲ್ಲಿ ಬಜ್ಪೆ ಪೊಲೀಸ್ ಠಾಣಾ ನಿರೀಕ್ಷಕ ಪರಶಿವಮೂರ್ತಿ, ಸಿಬ್ಬಂದಿ ಎಎಸ್ಸೈ ಜನಾರ್ದನಗೌಡ ಎಚ್.ಸಿ. ಪ್ರಕಾಶ್ ಮೂರ್ತಿ, ಪಿಸಿಗಳಾದ ಶಶಿಧರ್, ಪ್ರೇಮಾನಂದ ಭಾಗವಹಿಸಿದ್ದರು.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ವಿರುದ್ಧ ಹಲವು ಪ್ರಕರಣ

ಆರೋಪಿ ರವಿ ಯಾನೆ ಟಿಕ್ಕಿ ರವಿ ಎಂಬಾತನ ಮೇಲೆ ಉರ್ವ, ಬರ್ಕೆ, ಮಂಗಳೂರು ಪೂರ್ವ, ಮಂಗಳೂರು ಉತ್ತರ, ಕಾವೂರು, ಬಜ್ಪೆ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಆರೋಪಿ ಸಂದೀಪ್ ಪೂಜಾರಿ ಮೇಲೆ ಕಾವೂರು ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣ ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News