ಕಿನ್ಯ ಗ್ರಾಮ ಪಂಚಾಯತ್ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ

Update: 2018-07-19 16:23 GMT

ಕೊಣಾಜೆ,ಜು.19: ಕಿನ್ಯ ಗ್ರಾಮ ಪಂಚಾಯತ್ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಕಿನ್ಯ ಗ್ರಾಮ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ನಡೆಯಿತು,  ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಭಾರತಿ.ಕೆ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.

ಕಿನ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಕುತ್ತಡ್ಕ, ಗ್ರಾಮಸ್ಥರಿಗೆ ಸರಕಾರದಿಂದ ಸಿಗುವ ಸವಲತ್ತು ಯೋಜನೆಯ ವಿಷಯದಲ್ಲಿ ಮಾಹಿತಿ ನೀಡಿದರು.

ಪಂಚಾಯತ್ ಉಪಾಧ್ಯಕ್ಷ ಸಿರಾಜ್ ಕಿನ್ಯ ಮಾತನಾಡಿ ಕಿನ್ಯ ಗ್ರಾಮದಲ್ಲಿ ಕೃಷಿಕರು ಹೆಚ್ಚಾಗಿರುವುದರಿಂದ  ಕುಂಭ ದ್ರೋಣ ಮಳೆಯಿಂದ ಕೃಷಿಗಳು ನಾಶವಾಗಿದೆ,ಈ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರವೇ ಪರಿಶೀಲಿಸಿ ಪರಿಹಾರ ಒದಗಿಸಬೇಕು ಮತ್ತು ಕಿನ್ಯ ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಆಡಳಿತ ವರ್ಗದೊಂದಿಗೆ ಕೈ ಜೋಡಿಸಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ ಸರಕಾರಿ ಶಾಲೆಯ ಮಕ್ಕಳಿಗೆ ಕ್ಷೀರ ಬಾಗ್ಯ ,ಶೂ ಬಾಗ್ಯಕ್ಕಿಂತ ಹೆಚ್ಚುವರಿ ಶಿಕ್ಷಕರನ್ನು ನೀಡಿ ಸರಕಾರಿ ಶಾಲೆಯನ್ನು ಉಳಿಸಬೇಕೆಂದು ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಕಚೇರಿಯ ಸಂಯೋಜಕರಾದ ಪ್ರಾನ್ಸಿಸ್ ಲ್ಯಾನ್ಸಿ ಮಿನೇಜಸ್ ಅವರಿಗೆ ಮನವಿ ಮಾಡಿದರು.

ಗ್ರಾಮ ಕರಣಿಕ ಎನ್.ಜಿ.ಪ್ರಸಾದ್, ಅಬಕಾರಿ ಇಲಾಖೆಯ ಚಂದ್ರಹಾಸ್, ಸಹಾಯಕ ತೋಟಗಾರಿಕಾ ಇಲಾಖಾಧಿಕಾರಿ ಮಹೇಶ್.ಎನ್, ಮಂಗಳೂರು ಹೋಬಳಿ ಮಟ್ಟದ ಕೃಷಿ ಅಧಿಕಾರಿ ಅಜಿತ್ ಪ್ರಸಾದ್ ಎಚ್.ಎನ್, ಶಿಕ್ಷಣ ಇಲಾಖೆಯ ತಲಪಾಡಿ ಕ್ಲಸ್ಟರ್ ಸಿ.ಆರ್.ಪಿ ವೀಣಾ ಡೇಸಾ, ಉಳ್ಳಾಲ ಪೋಲೀಸ್ ಠಾಣೆಯ ಸುರೇಶ್ ಮತ್ತು ದೇವೇಂದ್ರ, ಕೋಟೆಕಾರ್ ಮೆಸ್ಕಾಮ್ ಕಚೇರಿಯ ಪ್ರವೀಣ್.ಬಿ.ಎನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಾರದಾ ಕೆ, ಕೋಟೆಕಾರ್ ಪಶು ಆಸ್ಪತ್ರೆಯ ವೈದ್ಯಕೀಯ ಪರೀಕ್ಷಕ ಚಂದ್ರಹಾಸ.ಪಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೋಪಿ ಪ್ರಕಾಶ್, ತಾಲೂಕು ಪಂಚಾಯತ್ ಸದಸ್ಯರಾದ ಅಬೂಬಕರ್ ಸಿದ್ದೀಕ್, ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಾಲಿನಿ.ಎನ್, ಸದಸ್ಯರಾದ ಮಹಾಬಲ ಪೂಂಜ,ಮೈಮೂನಾ, ಆಶಲತಾ, ಉಮ್ಮರ್ ಫಾರೂಕ್, ಕುಸುಮ, ಆಸಿಯಮ್ಮ, ಹಮೀದ್,ಕೆ.ಬಿ.ಅಬೂಸಾಲಿ, ಮಹಮ್ಮದ್, ಬಾಗಿ ಮೊದಲಾದವರು ಉಪಸ್ಥಿತರಿದ್ದರು.

ಪಂಚಾಯತ್ ಕಾರ್ಯದರ್ಶಿ ಸುರೇಖಾ ವರದಿ ಮಂಡನೆ ಮಾಡಿದರು, ಮೊಹಮ್ಮದ್ ಅಶ್ರಫ್ ಸ್ವಾತಿಸಿದರು. ಇದೇ ಸಂದರ್ಭದಲ್ಲಿ ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಕುತ್ತಡ್ಕ ಅವರನ್ನು ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News