ಅಮೆರಿಕ ನೌಕಾಪಡೆಯಲ್ಲಿ ಮಹಿಳೆಯರ ‘ಪೋನಿಟೇಲ್’ಗೆ ಅನುಮತಿ

Update: 2018-07-20 15:06 GMT

ವಾಶಿಂಗ್ಟನ್, ಜು. 20: ಅಮೆರಿಕದ ನೌಕಾಪಡೆಯಲ್ಲಿ ಸೇವೆ ಸಲ್ಲಿಸುವ ಮಹಿಳೆಯರಿಗೆ ‘ಕುದುರೆ ಬಾಲ’ ಜಡೆ (ಪೋನಿಟೇಲ್) ಕಟ್ಟಲು ಅವಕಾಶ ನೀಡಲಾಗಿದೆ. ಇದರಿಂದ ಉತ್ತೇಜನಗೊಂಡಿರುವ ನೌಕಾಪಡೆಯ ಪುರುಷರು ಗಡ್ಡ ಬೆಳೆಸಲು ಅನುಮತಿ ಕೋರಿದ್ದಾರೆ.

ನೌಕಾಪಡೆಯು ಕಳೆದ ವಾರ, ಸುದೀರ್ಘ ಅವಧಿಯಲ್ಲಿ ಜಾರಿಯಿದ್ದ ನೀತಿಯನ್ನು ಬದಲಾಯಿಸಿ, ಸೇವೆ ಸಲ್ಲಿಸುವ ಮಹಿಳೆಯರು ಕುದುರೆಬಾಲ ಜಡೆ, ಹಗ್ಗದಂಥ ಜಡೆ ಹಾಗೂ ಇತರ ಮಾದರಿಯ ಕೇಶ ಶೃಂಗಾರವನ್ನು ಹೊಂದಲು ಅನುಮತಿ ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ನೌಕಾಪಡೆ ಪುರುಷರು, ತಮಗೆ ಗಡ್ಡ ಬೆಳೆಸಲು ಅವಕಾಶ ನೀಡಬಹುದೇ ಎಂಬುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಕೋರಿದ್ದಾರೆ. ‘ನಮಗೆ ಗಡ್ಡ ಬೇಕು’ ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಓರ್ವ ಸೇಲರ್ ಫೇಸ್‌ಬುಕ್‌ನಲ್ಲಿ ಹಾಕಿರುವ ಸಂದೇಶವನ್ನು ಸಾವಿರಾರು ಬಾರಿ ಶೇರ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News