ಸೌಹಾರ್ದದ ವಾತಾವರಣ ಮತ್ತೆ ಕಟ್ಟುವಲ್ಲಿ ಆತ್ಮಕಥನ ಪ್ರೇರಣೆಯಾಗಲಿ: ಬಿ.ಎ.ವಿವೇಕ ರೈ

Update: 2018-07-21 09:25 GMT

ಮಂಗಳೂರು, ಜು.20: ಮಾಜಿ ಸಚಿವ ಬಿ.ಎ.ಮೊಹಿದೀನ್ ಅವರ ಆತ್ಮಕಥನ ಕೇವಲ ‘ನನ್ನೊಳಗಿನ ನಾನು’ ಅಲ್ಲ. ಅದು ‘ನಮ್ಮೊಳಗಿನ ನಾನು’ ಆಗಿದೆ. ಕಳಕೊಂಡ ಮೌಲ್ಯವನ್ನು ಮರುಶೋಧಿಸುವ ಆಕರದಂತೆಯೂ ಇರುವ ಈ ಆತ್ಮಕಥನವು ಕರಾವಳಿಯಲ್ಲಿ ಸೌಹಾರ್ದ ವಾತಾವರಣ ಮತ್ತೆ ಕಟ್ಟುವಲ್ಲಿ ಪ್ರೇರಣೆಯಾಗಲಿ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದರು.

ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಮಾಜಿ ಸಚಿವ, ಹಿರಿಯ ಚೇತನ ಬಿ.ಎ.ಮೊಹಿದೀನ್ ಅವರ ‘ನನ್ನೊಳಗಿನ ನಾನು’ ಆತ್ಮಕಥನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಹಿಂದೂ ಮುಸ್ಲಿಂ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದ್ದ ಬಿ.ಎ.ಮೊಹಿದೀನ್ ತನ್ನ ಬದುಕಿನುದ್ದಕ್ಕೂ ಶುದ್ಧ ರಾಜಕಾರಣಕ್ಕೆ ಹೆಸರಾಗಿದ್ದರು. ಸಮುದಾಯದ ಅಸ್ಮಿತೆಯ ಪ್ರತೀಕವಾಗಿದ್ದ ಅವರ ಆತ್ಮಕಥನವು ಕಾವ್ಯಾತ್ಮಕವಾಗಿದೆ, ಭಾವನಾತ್ಮಕವಾಗಿದೆ. ವಸ್ತು ರೂಪದಲ್ಲಿ ಕಟ್ಟಿಕೊಡುವ ಈ ಕೃತಿಯು ಸಾಂಸ್ಕೃತಿಕವಾಗಿಯೂ ಮಹತ್ವ ಪಡೆದಿದೆ ಎಂದು ಡಾ.ಬಿ.ಎ.ವಿವೇಕ ರೈ ನುಡಿದರು.

ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಮಾಜಿ ಸಚಿವ ಎಂ.ಸಿ.ನಾಣಯ್ಯ, ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್, ಐವನ್ ಡಿಸೋಜ, ಮಾಜಿ ಸಚಿವರಾದ ರಮನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ವಸಂತ ಬಂಗೇರಾ, ಜೆ.ಆರ್.ಲೋಬೊ, ಯೋಗೀಶ್ ಭಟ್, ಮೇಯರ್ ಭಾಸ್ಕರ ಮೊಯ್ಲಿ, ವಾರ್ತಾಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ,ಬ್ಯಾರೀಸ್ ಸಂಸ್ಥೆಯ ಮುಖ್ಯಸ್ಥ ಸೈಯದ್ ಮುಹಮ್ಮದ್ ಬ್ಯಾರಿ, ಯೆನೆಪೊಯ ಸಂಸ್ಥೆಯ ಮುಖ್ಯಸ್ಥ ಯೆನೆಪೊಯ ಅಬ್ದುಲ್ಲ ಕುಂಞಿ, ವಾರ್ತಾಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ವಸಂತ ಆಚಾರಿ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಮಹಿಳಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ, ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಕಣಚೂರು ಮೋನು, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಕವಿತಾ ಸನಿಲ್, ಬ್ಯಾರಿ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್, ಮಾಜಿ ಅಧ್ಯಕ್ಷ ಎಂ.ಬಿ.ಅಬ್ದುಲ್ ರಹ್ಮಾನ್ ವಿವಿಧ ಕ್ಷೇತ್ರದ ಪ್ರಮುಖರಾದ ಜಿ.ಎ.ಬಾವಾ, ಸದಾನಂದ ಪೂಂಜಾ, ಬಿ.ಎಚ್.ಖಾದರ್, ವೈ.ಮುಹಮ್ಮದ್ ಬ್ಯಾರಿ, ಹರಿಕೃಷ್ಣ ಪುನರೂರು, ರವಿಶಂಕರ್ ಶೆಟ್ಟಿ, ಆತ್ಮಕಥನದ ನಿರೂಪಕ ಮುಹಮ್ಮದ್ ಕುಳಾಯಿ, ಅಳಿಯಂದಿರಾದ ಅಹ್ಮದ್ ಶರೀಫ್, ಮುಹಮ್ಮದ್ ನವಾಝ್ ಮತ್ತಿತರರು ಉಪಸ್ಥಿತರಿದ್ದರು.

ಆತ್ಮಕಥನದ ನಿರೂಪಕ ಬಿ.ಎ. ಮುಹಮ್ಮದ್ ಅಲಿ ಸ್ವಾಗತಿಸಿದರು. ಟೀಕೇಸ್ ಗ್ರೂಪ್‌ನ ಉಮರ್ ಟೀಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಎ.ಮೊಹಿದೀನ್ ಅವರ ಪುತ್ರ ಆಸಿಫ್ ಮಸೂದ್ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News