'ರೈನ್ ಬೋವ್' ಕೃತಿ ಬಿಡುಗಡೆ

Update: 2018-07-20 16:21 GMT

ಮಂಗಳೂರು, ಜು.20:ಸಾಮಾಜಿಕ ಜಾಲ ತಾಣಗಳನ್ನು ಮಿತಿಯಲ್ಲಿ ಬಳಸಿದರೆ ಉತ್ತಮ ಪುಸ್ತಕ ಓದು ಜ್ಞಾನ ವಿಕಸನದ ಪ್ರಮುಖ ಸಾಧನವಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಅವರು ನಗರದ ಕೆನರಾ ಕಾಲೇಜಿನ ಓದುಗರ ಸಂಘದ ವತಿಯಿಂದ ರಚಿಸಿದ ರೈನ್ ಬೋವ್ ಎಂಬ ಚೊಚ್ಚಲ ಕೃತಿಯನ್ನು ಕಾಲೇಜಿನ ರತ್ನಾ ಬಾಯ್ ಮೆಮೋರಿಯಲ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಪ್ರಸಕ್ತ ದಿನಗಳಲ್ಲಿ ಪೇಸ್ ಬುಕ್,ವಾಟ್ಸಪ್ ಎಂದು ಅದರ ಹಿಂದೆ ಇರುವವರ ಸಂಖ್ಯೆ ಹೆಚ್ಚು ಈ ಹಿನ್ನೆಲೆಯಲ್ಲಿ ಪುಸ್ತಕದ ಮೇಲೆ ಕಣ್ಣೋಡಿಸುವವರ ಸಂಖ್ಯೆ ಕಡಿಮೆಯಾಗಿದೆ .ಈ ರೀತಿಯ ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಬದುಕನ್ನು ಅಳವಡಿಸಿಕೊಂಡು ಒದ್ದಾಡುತ್ತಿರುವವರ ಸಂಖ್ಯೆ ಇಂತಹ ಸನ್ನಿವೇಶದಲ್ಲಿ ಪುಸ್ತಕದ ಓದು ವಿಭಿನ್ನವಾದ ಅನುಭವ ನೀಡುತ್ತದೆ.ಪುಸ್ತಕದ ಓದು ಮಾನಸಿಕ ವಿಕಸನ ಹಾಗೂ ಜ್ಞಾನದ ಭಂಡಾರವನ್ನು ಹೆಚ್ಚಿಸುತ್ತದೆ .ಸಾಮಾಜಿಕ ಜಾಲತಾಣಗಳ ಬಳಕೆ ಮಿತಿಯಲ್ಲಿದ್ದರೆ ಉತ್ತಮ ಎಂದು ವೇದವ್ಯಾಸ ಕಾಮತ್ ತಿಳಿಸಿದರು.

ಸಮಾರಂಭದ ವೇದಿಕೆಯಲ್ಲಿ ಮನಪಾ ಸದಸ್ಯ ಪ್ರೇಮಾನಂದ ಶೆಟ್ಟಿ ಓದುಗರ ಸಂಘದ ಪದಾಧಿಕಾರಿಗಳಾದ ಎಂ. ರಂಗ ನಾಥ ಭಟ್, ಡಾ.ಕೆ.ವಿ.ಮಾಲಿನಿ, ಸುಧೀರ್ ಪೈ, ರೇಖಾ ದೇವಿ, ಪಿ.ಎಸ್.ಪ್ರಮೋದ್ ಕುಮಾರ್, ತಾರಾ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News