ಜೂಜಾಟ: ಏಳು ಮಂದಿ ಆರೋಪಿಗಳ ಬಂಧನ

Update: 2018-07-20 16:32 GMT

ಬಂಟ್ವಾಳ, ಜು. 20: ಬಂಟ್ವಾಳ ತಾಲೂಕು ಕೇಪು ಗ್ರಾಮದ ಚಿಮಿನಿಯಡ್ಕದ ಮನೆಯೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇರೆಗೆ ಏಳು ಮಂದಿ ಆರೋಪಿಗಳನ್ನು ವಿಟ್ಲ ಠಾಣಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕಾಸರಗೋಡು ನಿವಾಸಿಗಳಾದ ರಾಧಾಕೃಷ್ಣ ಶೆಟ್ಟಿ (36), ಬಾಬು ಪೂಜಾರಿ, ಕಮಲಾಕ್ಷ ಪೂಜಾರಿ (45), ಪ್ರದೀಪ್ (32), ಸ್ಟೀವನ್ ಡಿಸೋಜಾ (60) ಹಾಗೂ ಬದಿಯಡ್ಕದ ಬೆಳಾ ಗ್ರಾಮದ ನಿವಾಸಿಗಳಾದ ವಿಜಯನ್ ಡಿ. (40), ಚಂದ್ರನ್ ಯು, ಪೆರ್ಲದ ನಿವಾಸಿ ಬಾಬು ಪೂಜಾರಿ ಬಂಧಿತ ಆರೋಪಿಗಳು. 
ಶುಕ್ರವಾರ ಸಂಜೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಕೇಪು ಗ್ರಾಮದ ಚಿಮಿನಿಯಡ್ಕ ಎಂಬಲ್ಲಿನ ಮನೆಯೊಂದರಲ್ಲಿ ಜೂಜಾಟ ತೊಡಿಗಿದ್ದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 65,960 ರೂ. ಸಹಿತ ಏಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಅಧೀಕ್ಷಕ ಡಾ. ಬಿ.ಆರ್.ರವಿಕಾಂತೇಗೌಡ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಜಿತ್, ಸಹಾಯಕ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಾಣೆ ಹಾಗೂ ಬಂಟ್ವಾಳ ಉಪವಿಭಾಗದ ಮಾರ್ಗದರ್ಶನದಲ್ಲಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಿದ್ದು, ವಿಟ್ಲ ಠಾಣಾಧಿಕಾರಿ ನಾಗರಾಜ್ ಎಚ್, ಸಿಬ್ಬಂದಿ ರಕ್ಷಿತ್ ರೈ, ಲೊಕೇಶ್, ರಮೇಶ್, ಜಯ ಕುಮಾರ್, ಪ್ರವೀಣ್ ಕುಮಾರ್, ಅನುಕುಮಾರ್, ಬಂಟ್ವಾಳ ಗ್ರಾಮಾಂತರ ಸಿಬ್ಬಂದಿ ಸುರೇಶ್, ರಾಜು, ಬಸವರಾಜು ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News