ಹೊಸ 100 ರೂ. ನೋಟುಗಳ ಬಿಡುಗಡೆಗೆ ಎಟಿಎಂ ಸಿದ್ಧಗೊಳಿಸಲು 100 ಕೋಟಿ ರೂ. ಅಗತ್ಯ!

Update: 2018-07-20 17:18 GMT

ಹೊಸದಿಲ್ಲಿ, ಜು.20: ನೂತನ 100 ರೂ. ನೋಟುಗಳ ಬಿಡುಗಡೆಯು ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಲಿದೆ ಹಾಗು ದೇಶದ 2.4 ಲಕ್ಷ ಮೆಷಿನ್ ಗಳು ಹೊಸ ನೋಟುಗಳನ್ನು ಸ್ವೀಕರಿಸುವಂತೆ ಮಾಡಲು 100 ಕೋಟಿ ರೂ. ಬೇಕಾಗಬಹುದು ಎಂದು ಎಟಿಎಂ ಆಪರೇಟರ್ ಗಳು ತಿಳಿಸಿದ್ದಾಗಿ ndtv.com ವರದಿ ಮಾಡಿದೆ.

"100 ರೂ. ನೋಟಿಗಾಗಿ ನಾವು ಎಟಿಎಂಗಳನ್ನು ಮರುಸ್ಥಾಪಿಸಬೇಕು. ಆದ್ದರಿಂದ ಭಾರತದಲ್ಲಿ 2.4 ಲಕ್ಷ ಎಟಿಎಂಗಳನ್ನು ಮರುಸ್ಥಾಪಿಸಬೇಕಾದೀತು" ಎಂದು ಎಫ್ ಎಸ್ ಎಸ್ ಅಧ್ಯಕ್ಷ ವಿ.ಬಾಲಸುಬ್ರಮಣಿಯನ್ ಮಾಹಿತಿ ನೀಡಿದೆ.

ಹೊಸ ಹಾಗು ಹಳೆಯ ವಿನ್ಯಾಸದ 100 ರೂ. ನೋಟುಗಳ ಸಹ ಅಸ್ತಿತ್ವವು ಕೂಡ ದೊಡ್ಡ ಸವಾಲಾಗಲಿದೆ ಎಂದವರು ಹೇಳಿದರು. 200 ರೂ. ನೋಟುಗಳಿಗಾಗಿ ಎಟಿಎಂಗಳನ್ನು ಮರುಸ್ಥಾಪಿಸಿದ ಕೆಲ ದಿನಗಳಲ್ಲೇ ಹೊಸ ನೋಟು ಬಿಡುಗಡೆಯಾಗಲಿರುವುದು ಕಂಪೆನಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News