×
Ad

ಮೈಲುತುತ್ತು ಖರೀದಿಗೆ ಸಹಾಯಧನ

Update: 2018-07-20 23:44 IST

ಮಂಗಳೂರು, ಜು.20: ಪ್ರಸಕ್ತ ಸಾಲಿನ ಮಂಗಳೂರು ಹಾಗೂ ಮೂಡಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆಯಾಗುತ್ತಿದ್ದು, ರೈತರು ರೋಗ ನಿಯಂತ್ರಣಕ್ಕೆ ಶೇ.1ರ ಬೋರ್ಡೋ ದ್ರಾವಣ ಸಿಂಪಡಣೆ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ.

ಈ ರೀತಿ ತೆಂಗು, ಅಡಿಕೆ ರೋಗ ನಿಯಂತ್ರಣಕ್ಕೆ ಖರೀದಿಸುವ ಮೈಲುತುತ್ತು ಸುಣ್ಣ ಖರೀದಿಗೆ ಶೇ.75ರ ಸಹಾಯಧನ ಪ್ರತಿ ಎಕರೆಗೆ 3000 ರೂ.ವರೆಗೆ ಸಹಾಯ ಲಭ್ಯವಿದೆ.

ಅರ್ಜಿದಾರರು ತಾವು ಖರೀದಿಸಿದ ಕೀಟರೋಗ ನಿಯಂತ್ರಣದ ಬಿಲ್ಲುಗಳನ್ನು ಆರ್.ಟಿ.ಸಿ, ಆಧಾರ್ ಪ್ರತಿ, ಬೆಳೆ ದೃಢೀಕರಣ ಪತ್ರ, ಬ್ಯಾಂಕ್ ಪುಸ್ತಕದ ಪ್ರತಿಯೊಂದಿಗೆ ರೈತ ಸಂಪರ್ಕ ಕೇಂದ್ರ ಮೂಡಬಿದಿರೆ ಅಥವಾ ಹಿರಿಯ ಸಹಾಯಕಾ ತೋಟಗಾರಿಕಾ ನಿರ್ದೇಶಕರ ಕಚೇರಿ, ಮಂಗಳೂರು ಇವರಿಗೆ ಸಲ್ಲಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News