ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಕಾನ್ ಸ್ಟೇಬಲ್ ಸಲೀಂ ಅಹ್ಮದ್ ಮೃತದೇಹ ಪತ್ತೆ

Update: 2018-07-21 14:00 GMT

ಶ್ರೀನಗರ, ಜು.21: ದಕ್ಷಿಣ ಕಾಶ್ಮೀರದಲ್ಲಿ ಕುಲ್ಗಾಮ್ ಜಿಲ್ಲೆಯಲ್ಲಿರುವ ಮನೆಯಿಂದ ಉಗ್ರಗಾಮಿಗಳು ಅಪಹರಿಸಿದ್ದ ಪೊಲೀಸ್ ಕಾನ್ ಸ್ಟೇಬಲ್ ರ ಮೃತದೇಹ ಇಂದು ಪತ್ತೆಯಾಗಿದೆ. ಜಿಲ್ಲೆಯ ಬಯಲು ಪ್ರದೇಶವೊಂದರಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಜಮ್ಮು ಕಾಶ್ಮೀರದ ಕಥುವಾದಲ್ಲಿ ತರಬೇತಿಯಲ್ಲಿದ್ದ ಕಾನ್ ಸ್ಟೇಬಲ್ ಸಲೀಮ್ ಅಹ್ಮದ್ ಶಾರನ್ನು ಉಗ್ರರು ಶುಕ್ರವಾರ ರಾತ್ರಿ ಅಪಹರಿಸಿದ್ದರು. "ನಮ್ಮ ಸಹೋದ್ಯೋಗಿ ಸಲೀಂ ಅಹ್ಮದ್ ಶಾ ಅವರನ್ನು ಅಪಹರಿಸಿದ್ದ ಉಗ್ರರು ಅವರನ್ನು ಕೊಂದಿದ್ದಾರೆ. ನಾವೆಲ್ಲರೂ ಅವರ ಕುಟುಂಬದ ಜೊತೆಗಿದ್ದೇವೆ" ಎಂದು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News