ಸ್ಯಾನಿಟರಿ ನ್ಯಾಪ್ಕಿನ್ ಗೆ ಜಿಎಸ್ ಟಿಯಿಂದ ವಿನಾಯಿತಿ

Update: 2018-07-21 14:08 GMT

ಹೊಸದಿಲ್ಲಿ, ಜು.21: ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಜಿಎಸ್ ಟಿಯಿಂದ ಹೊರಗಿಡಲಾಗಿದೆ ಎಂದು ಜಿಎಸ್ ಟಿ ಕೌನ್ಸಿಲ್ ಜೊತೆಗಿನ ಮಾತುಕತೆಯ ನಂತರ ಮಹಾರಾಷ್ಟ್ರ ಹಣಕಾಸು ಸಚಿವ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ.

ಒಂದು ವರ್ಷಗಳ ಕಾಲ ಸ್ಯಾನಿಟರಿ ನ್ಯಾಪ್ಕಿನ್ ಗಳಿಗೆ 12 ಶೇ. ತೆರಿಗೆ ವಿಧಿಸಲಾಗಿತ್ತು. ಸರಕಾರದ ಈ ಕ್ರಮದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಿದಿರಿನ ಮೇಲಿನ ತೆರಿಗೆಯನ್ನೂ 12 ಶೇ.ಕ್ಕೆ ಇಳಿಸಲಾಗಿದೆ ಎಂದೂ ಸುಧೀರ್ ಇದೇ ಸಂದರ್ಭ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News