ಸರಕಾರಿ ಶಾಲೆಗಳ ವಿಲೀನ ಕ್ರಮ ಖಂಡಿಸಿ ಡಿಸಿಗೆ ಮನವಿ
Update: 2018-07-21 20:42 IST
ಉಡುಪಿ, ಜು.21: ಕಡಿಮೆ ಹಾಜರಾತಿ ಇರುವ 28,847 ಶಾಲೆಗಳನ್ನು ವಿಲೀನಗೊಳಿಸುವ ನಿರ್ಧಾರವನ್ನು ರಾಜ್ಯ ಸರಕಾರ ಕೈ ಬಿಡುವಂತೆ ಒತ್ತಾಯಿಸಿ ಎಸ್‌ಐಓ ಉಡುಪಿ ಜಿಲ್ಲಾ ಘಟಕ ಇತ್ತೀಚೆಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಮನವಿ ಸಲ್ಲಿಸಿತು.
ಉಡುಪಿ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿನ ಸೌಲಭ್ಯಗಳ ಗುಣಮಟ್ಟವನ್ನು ಹೆಚ್ಚಿಸಬೇಕು. ಈ ಬಾರಿ ದಾಖಲಾತಿಯಿಲ್ಲದೆ ಮುಚ್ಚಲ್ಪಡುವ ಸರಕಾರಿ ಶಾಲೆಗಳ ಗ್ರಾಮಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕೊರತೆಯ ಬಗ್ಗೆ ಸೂಕ್ತ ಅಧ್ಯಯನ ನಡೆಸಿ ಆ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಸರಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ಎಸ್‌ಐಓ ಮನವಿಯಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಎಸ್‌ಐಓ ಜಿಲ್ಲಾಧ್ಯಕ್ಷ ಯಾಸೀನ್ ಕೋಡಿಬೆಂಗ್ರೆ, ಎಸ್‌ಐಓ ಉಡುಪಿ ಘಟಕಾಧ್ಯಕ್ಷ ಫಾಜಿಲ್ ಉಡುಪಿ ಮತ್ತು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ನ ಮುಹಮ್ಮದ್ ಝಕಿ ಉಪಸ್ಥಿತರಿದ್ದರು.