ಹಜ್ - ಕುರ್ಬಾನಿ ಕುರಿತು ಸಮಗ್ರ ಅಧ್ಯಯನ ಶಿಬಿರ
ಕಾಪು, ಜು.21: ಸುನ್ನಿ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಲ್‌ಹಾಜ್ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ ಅವರಿಂದ ಹಜ್ ಮತ್ತು ಕುರ್ಬಾನಿ ಬಗ್ಗೆ ಸಮಗ್ರ ಅಧ್ಯಯನ ಶಿಬಿರವು ಕಾಪು ಪೊಲಿಪು ಮದ್ರಸ ಹಾಲ್ನಲ್ಲಿ ಇತ್ತೀಚೆಗೆ ಜರಗಿತು.
ಅಧ್ಯಕ್ಷತೆಯನ್ನು ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ತೌಫೀಕ್ ಅಬ್ದುಲ್ಲ ನಾವುಂದ ವಹಿಸಿದ್ದರು. ಕಾಪು ಉಸ್ತಾದ್ ಅಹ್ಮದ್ ಖಾಸಿಮಿ ದುವಾ ನೆರವೇರಿಸಿದರು. ಇಖ್ರಾಮುಲ್ಲ ಸಖಾಫಿ ನಾವುಂದ ಶಿಬಿರವನ್ನು ಉದ್ಘಾಟಿಸಿದರು.
ಜಿಲ್ಲಾ ಕೋ-ಆರ್ಡಿನೇಷನ್ ಸಮಿತಿ ಅಧ್ಯಕ್ಷ ಬಿ.ಕೆ.ಅಬ್ದುರ್ರಹ್ಮಾನ್ ಮದನಿ ಮೂಳೂರು, ಮದ್ರಸ ಅಧ್ಯಾಪಕ ಒಕ್ಕೂಟದ ಜಿಲ್ಲಾಧ್ಯಕ್ಷ ಅಬ್ದುರ್ರಝಾಕ್ ಖಾಸಿಮಿ, ಎಸ್‌ಎಂಎ ಜಿಲ್ಲಾ ಕಾರ್ಯದರ್ಶಿ ಅಬ್ದುರ್ರಶೀದ್ ಸಖಾಫಿ, ರಾಜ್ಯ ಎಸ್‌ವೈಎಸ್ ಉಪಾಧ್ಯಕ್ಷ ಹಾಜಿ ಮುಹಿಯ್ಯಧ್ಧೀನ್ ಕಾಪು ಮೊದಲಾದವರು ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಮೂಳೂರು ವಂದಿಸಿದರು.