ಉಜಿರೆ : ಮರ ಬಿದ್ದು ಅಂಗಡಿಗಳಿಗೆ ಹಾನಿ
Update: 2018-07-21 21:06 IST
ಬೆಳ್ತಂಗಡಿ,ಜು.21: ಉಜಿರೆ ಪೇಟೆಯ ಮಾರಿಗುಡಿ ಎದುರು ಭಾಗದಲ್ಲಿ ಬೃಹದಾಕಾರ ಮರವೊಂದು ಅಂಗಡಿಗಳ ಮೇಲೆ ಶನಿವಾರ ರಾತ್ರಿ ಉರುಳಿ ಬಿದ್ದು ಮೂರು ಅಂಗಡಿಗಳಿಗೆ ಹಾನಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಉಜಿರೆಯಿಂದ ಚಾರ್ಮಾಡಿಗೆ ಹೋಗುವ ರಸ್ತೆಯ ಬದಿಯಲ್ಲಿರುವ ಮರ ನಿರಂತರ ಗಾಳಿಮಳೆಗೆ ಧರಾಶಾಹಿಯಾಗಿದೆ. ಜನ ಸಂಚಾರ ಅಧಿಕವಾಗಿರುವ ಪ್ರದೇಶದಲ್ಲೇ ಈ ಮರವಿದ್ದು ಹೆದ್ದಾರಿಗೆ ತಾಗಿಕೊಂಡೆ ಇತ್ತು. ಅದರ ಬದಿಯಲ್ಲಿರುವ ಮೂರು ಅಂಗಡಿಗಳ ಮೇಲೆ ಮರ ಬಿದ್ದದ್ದರಿಂದ ಅಂಗಡಿಗಳಿಗೆ ಹಾನಿ ಆಗಿದೆ. ಆದರೆ ಅಲ್ಲಿ ಜನರು ಇದ್ದರೂ ಯಾವುದೇ ಅಪಾಯ ಸಂಭವಿಸಿಲ್ಲ.
ಸ್ಥಳೀಯರ ನೆರವಿನಿಂದ ಮರವನ್ನು ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ.