ಭಾರತೀಯ ವಲಸಿಗರಿಗೆ ಜೈಲಿನಲ್ಲಿ ಕೈಕೋಳ ಹಾಕಿಲ್ಲ: ಕಾನೂನು ನೆರವು ಸಂಸ್ಥೆ

Update: 2018-07-21 16:15 GMT

ವಾಶಿಂಗ್ಟನ್, ಜು. 21: ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ 50ಕ್ಕೂ ಅಧಿಕ ಭಾರತೀಯರನ್ನು ಒರೆಗಾನ್ ರಾಜ್ಯದ ಜೈಲಿನಲ್ಲಿ ಕೈಕೋಳ ಹಾಕಿ ಇರಿಸಲಾಗಿಲ್ಲ ಎಂದು ಕಾನೂನು ನೆರವು ಸಂಸ್ಥೆಯೊಂದರ ಸದಸ್ಯರು ಶುಕ್ರವಾರ ಹೇಳಿದ್ದಾರೆ.

ಭಾರತದಲ್ಲಿ ತಮ್ಮ ವಿರುದ್ಧ ಧಾರ್ಮಿಕ ಮತ್ತು ರಾಜಕೀಯ ಹಿಂಸಾಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಅಮೆರಿಕದಲ್ಲಿ ಆಶ್ರಯ ಕೋರಿದ್ದ ಭಾರತೀಯ ವಲಸಿಗರನ್ನು ಜೈಲಿನಲ್ಲಿ ಕ್ರಿಮಿನಲ್‌ಗಳಂತೆ ಕಾಣಲಾಗುತ್ತಿದೆ ಎಂಬುದಾಗಿ ಮಾಧ್ಯಮ ವರದಿಗಳು ಹೇಳಿದ್ದವು.

‘‘ಶೆರಿಡಾನ್‌ನಲ್ಲಿ ಇರಿಸಲಾಗಿರುವ ವಲಸಿಗರಿಗೆ ಕೈಕೋಳ ತೊಡಿಸಲಾಗಿದೆ ಹಾಗೂ ಸಂಕಲೆಯಿಂದ ಬಂಧಿಸಲಾಗಿದೆ ಎನ್ನುವುದು ನನ್ನ ಹೇಳಿಕೆಯಲ್ಲ. ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ’’ ಎಂದು ಸಮುದಾಯ ಕಾಲೇಜು ಪ್ರೊಫೆಸರ್ ನವನೀತ್ ಕೌರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News