ಗಂಗೊಳ್ಳಿ : ಹೊಳೆಯಲ್ಲಿ ಮುಳುಗಿ ವ್ಯಕ್ತಿ ನಾಪತ್ತೆ
Update: 2018-07-21 22:26 IST
ಗಂಗೊಳ್ಳಿ, ಜು.21: ನಾಡ ಗ್ರಾಮದ ಕಳುವಿನ ಬಾಗಿಲುವಿನಲ್ಲಿರುವ ಸೌಪರ್ಣಿಕ ಹೊಳೆಗೆ ಗಾಳ ಹಾಕಿ ಮೀನು ಹಿಡಿಯುತ್ತಿದ್ದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಜು.20ರಂದು ಮಧ್ಯಾಹ್ನ ವೇಳೆ ನಡೆದಿದೆ.
ನಾಪತ್ತೆಯಾದವರನ್ನು ಕಳುವವಿನಬಾಗಿಲು ಕೋಡುಗುಂಜೆಯ ನಾರಾಯಣ ಎಂಬವರ ಮಗ ಸುಧೀಂದ್ರ(32) ಎಂದು ಗುರುತಿಸಲಾಗಿದೆ. ಇವರು ಗಾಳ ಹಾಕುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಸೌಪರ್ಣಿಕ ಹೊಳೆಗೆ ಬಿದ್ದಿದ್ದು, ನೀರಿನ ಸೆಳೆತಕ್ಕೆ ಅವರು ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.