ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ

Update: 2018-07-21 17:53 GMT

ಉಡುಪಿ, ಜು.21: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಲುವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಗೆಒಳಪಡುವ 118-ಬೈಂದೂರು, 119-ಕುಂದಾಪುರ, 120-ಉಡುಪಿ, 121-ಕಾಪು, 122-ಕಾರ್ಕಳ ವಿಧಾನಸಬಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಬರುವ ಮನೆಗಳಿಗೆ ಜು.16ರಿಂದ ಆ.10ರವರೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ಗುರುತಿಸುವ ಕಾರ್ಯವನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ನಡೆಸಲಿದ್ದಾರೆ.

ಈ ಸಂದರ್ಭದಲ್ಲಿ ಈ ಕೆಳಗೆ ತಿಳಿಸಿರುವ ಅಂಶಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ತಮ್ಮ ವ್ಯಾಪ್ತಿಯ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಆಗದೆ ಇರುವ ವ್ಯಕ್ತಿಗಳು ಹಾಗೂ ಜನವರಿ1, 2018ರ ನಂತರ 18 ವರ್ಷ ಪ್ರಾಯ ಪೂರ್ಣಗೊಂಡಿರುವ ಹಾಗೂ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸದೇ ಇರುವ ಅರ್ಹ ಮತದಾರರು.

2019ರ ಜ.1ಕ್ಕೆ 18 ವರ್ಷ ಪ್ರಾಯ ಪೂರ್ಣಗೊಳ್ಳಲಿರುವ ಅರ್ಹರ ಮಾಹಿತಿ, ಮತದಾರರ ಪಟ್ಟಿಯಲ್ಲಿ ಹೆಸರು ಪುನರಾವರ್ತನೆಗೊಂಡಿರುವವರ ಬಗ್ಗೆ ಮಾಹಿತಿ, ಮತದಾರರ ಪಟ್ಟಿಯಲ್ಲಿ ಮೃತರಾದ ಮತದಾರರ ಮಾಹಿತಿ, ಶಾಶ್ವತವಾಗಿ ವಲಸೆ/ಗುಳೆ ಹೋಗಿರುವ ಮತದಾರರ ಮಾಹಿತಿ, ವಿಕಲಚೇತನ ಮತದಾರರ ಮಾಹಿತಿ, ಹೆಸರು, ವಿಳಾಸಗಳಲ್ಲಿ ಲೋಪದೋಷಗಿರುವ ಬಗ್ಗೆ ಮಾಹಿತಿಯನ್ನು ಪಡೆಯಲಾಗುತ್ತದೆ.

ಈ ಕುರಿತು ಹೆಚ್ಚಿನ ವಿವರಗಳಿಗೆ ಜಿಲ್ಲಾಧಿಕಾರಿ ಕಛೇರಿ ದೂರವಾಣಿ ಸಂಖ್ಯೆ: 0820-2574926/2574920, ತಾಲೂಕು ಕಛೇರಿ ಉಡುಪಿ (0820- 2521198), ತಾಲೂಕು ಕಚೇರಿ ಕುಂದಾಪುರ (08254-235567), ತಾಲೂಕು ಕಚೇರಿ ಕಾರ್ಕಳ (08258-230057), ಸಹಾಯಕ ಕಮೀಷನರ್ ಕುಂದಾಪುರ (08254-231984) ಇವರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News