×
Ad

​ಹಜ್: ದ್ವಿತೀಯ ತಂಡದಲ್ಲಿ 146 ಯಾತ್ರಾರ್ಥಿಗಳ ಪಯಣ

Update: 2018-07-22 18:13 IST

ಮಂಗಳೂರು, ಜು.22: ಮಂಗಳೂರು ವಿಮಾನ ನಿಲ್ದಾಣದ ಮೂಲಕ 72 ಪುರುಷರು ಮತ್ತು 74 ಮಹಿಳೆಯರ ಸಹಿತ 146 ಮಂದಿ ಹಜ್ ಯಾತ್ರಾರ್ಥಿಗಳು ರವಿವಾರ ಸಂಜೆ 4:49ಕ್ಕೆ ಮದೀನಾಕ್ಕೆ ಪಯಣ ಬೆಳೆಸಿದರು.

ಇದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಹೊರಟ ಹಜ್ ಯಾತ್ರಾರ್ಥಿಗಳ ದ್ವಿತೀಯ ತಂಡವಾಗಿದೆ. ಶನಿವಾರ ಸಂಜೆ ಹೊರಟ ಪ್ರಥಮ ತಂಡವು ಭಾರತೀಯ ಕಾಲಮಾನ ರಾತ್ರಿ 11:50ಕ್ಕೆ ಮದೀನಾ ತಲುಪಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂರನೆಯ ಹಾಗೂ ಕೊನೆಯ ತಂಡವು ಸೋಮವಾರ ಸಂಜೆ ಮದೀನಾಕ್ಕೆ ಪಯಣ ಬೆಳೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News