‘ಕರುಣಮಯಿ ರಾಮ’ನಿಂದ ಮಾತ್ರ ರಾಮಮಂದಿರ ನಿರ್ಮಾಣದ ಹುನ್ನಾರ ಎದುರಿಸಲು ಸಾಧ್ಯ: ಪ್ರಸನ್ನ

Update: 2018-07-22 13:30 GMT

ಉಡುಪಿ, ಜು.22: ಕೇವಲ ಒಂದಂಕಿಯ ಶಕ್ತಿ ಇದ್ದವರು ರಾಮನ ಹೆಸರಿ ನಿಂದ ಈಗ 300 ಶಕ್ತಿಯನ್ನು ಪಡೆದಿದ್ದಾರೆ. ಇವರು ಇನ್ನು ಕೆಲವೇ ತಿಂಗಳಲ್ಲಿ ರಾಮಮಂದಿರ ನಿರ್ಮಾಣದ ಹುನ್ನಾರವನ್ನು ಮತ್ತೆ ಎಬ್ಬಿಸುವವರಿದ್ದಾರೆ. ಇದನ್ನು ಎದುರಿಸಲು ಇರುವ ಏಕೈಕ ದಾರಿ ಕರುಣಮಯಿ ರಾಮ. ಇಲ್ಲದಿದ್ದರೆ ಹೇ ರಾಮ ಹೇಳಿ ಹುತಾತ್ಮರಾಗಬಹುದು. ಈಗ ನಾವು ಹುತಾತ್ಮರಾಗಲು ಸಿದ್ಧರಾಗಬೇಕಾಗಿದೆ ಎಂದು ದೇಸಿ ಚಿಂತಕ ಪ್ರಸನ್ನ ಹೇಳಿದ್ದಾರೆ.

ಉಡುಪಿ ಆಸಕ್ತ ಬಳಗದ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ ರವಿವಾರ ಆಯೋಜಿಸಲಾದ ‘ಹೇರಾಮ್’- ರಾಮಾಯಣ ಒಂದು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಇಂದು ರಾಮಾಯಣದ ದುರ್ಬಳಕೆ ಆಗುತ್ತಿದೆ. ರಾಮನಿಗೂ ರಾವಣನಿಗೂ ಇರುವ ಪ್ರತಿರೋಧವನ್ನು ಗುರುತಿಸಿದ್ದೇವೆ ಹೊರತು ರಾಮ ಕಟ್ಟಲು ಪ್ರಯತ್ನಿಸಿದ ಸಭ್ಯತೆಯು ದಶರಥ ಕಟ್ಟಿದ ಸಭ್ಯತೆಗಿಂತ ತುಂಬಾ ಭಿನ್ನವಾದುದು ಎಂಬುದನ್ನು ನಾವು ಗುರುತಿಸಿಲ್ಲ. ಇದೇ ಕಾರಣದಿಂದ ರಾಮಾಯಣ ದುರ್ಬಳಕೆ ಆಗುತ್ತಿದೆ ಎಂದು ಅವರು ತಿಳಿಸಿದರು.

ರಾಮಾಯಣದಲ್ಲಿ ಬ್ರಾಹ್ಮಣೀಕರಿಸಿದ ರೂಪಕವನ್ನು ನಾವು ನೋಡುತ್ತಿದ್ದೇವೆ. ಆ ರಾಮಾಯಣದಲ್ಲಿ ರಾಮ ದೇವರು ಎಂದು ಸಾಧಿಸಲು ಹಠ ಮಾಡು ತ್ತಿದ್ದೇವೆ. ಇದು ವಿಚಿತ್ರವಾಗಿರುವ ವಿತ್ತಂಡವಾದ. ಹುಟ್ಟುವಾಗಲೇ ದೇವರಾಗಿದ್ದ ರಾಮ, ದೇವರಾಗಿಯೇ ಸತ್ತ ಎಂದು ಪರಿಗಣಿಸುವುದಾದರೆ ಅಲ್ಲಿ ಬೆಳ ವಣಿಗೆ ಇಲ್ಲದ ಮಾತ್ರವಾಗಿ ರಾಮ ಕಾಣುತ್ತಾನೆ ಎಂದರು.

ರಾಮ ರಾಜ್ಯವು ಗ್ರಾಮ ರಾಜ್ಯಕ್ಕೆ ಸಮಾನವಾದುದು. ಗ್ರಾಮ ರಾಜ್ಯವೇ ಇಲ್ಲದ ಒಂಟಿಯಾದ ರಾಮನ ಕೈಗೆ ಬಿಲ್ಲು ಕೊಟ್ಟು ಅವನನ್ನು ಬಾಬರ್ ವಿರುದ್ಧ ಸೆಣಸುವಂತೆ ಮಾಡಿ, ಆಂಜನೇಯನನ್ನು ವಿಕಾರವಾದ ರಾಕ್ಷಸ ರೂಪಿಯನ್ನಾಗಿ ಮಾಡುವ ರಾಮಾಯಣವನ್ನು ನಾನು ಒಪ್ಪುವುದಿಲ್ಲ ಎಂದು ಅವರು ಹೇಳಿದರು.

ಆಂಜನೇಯ ಸಭ್ಯ ಮನುಷ್ಯ. ಆದರೆ ಇಂದು ನಾವು ಆಟೋ ರಿಕ್ಷಾ, ಕಾರಿನ ಹಿಂಭಾಗದಲ್ಲಿ ಅವನನ್ನು ವಿಕಾರವಾಗಿ ಚಿತ್ರಿಸಿ ಬಜರಂಗ ಬಲಿಯನ್ನಾಗಿ ಬಲಿ ಕೊಡಲು ನೇಮಿಸಿದ್ದೇವೆ. ಈ ದೇಶದ ಶೇ.20ರಷ್ಟು ಜನರನ್ನು ಚುಚ್ಚುತ್ತ ಹೋದರೆ ಈ ದೇಶ, ದೇಶವಾಗಿ ಉಳಿಯಲು ಸಾಧ್ಯವೇ ಇಲ್ಲ ಎಂದು ಅವರು ತಿಳಿಸಿದರು.

ವಿವೇಕಾನಂದರು ಹಿಂದೂ ಧರ್ಮವನ್ನು ಕಾಪಾಡಿದ ಮನುಷ್ಯ ಎಂಬುದಾಗಿ ಮಾತ್ರ ನಾವು ನೋಡುತ್ತಿದ್ದೇವೆ. ಆದರೆ ಅವರು ಸಾಮಾಜಿಕ ನ್ಯಾಯಕ್ಕಾಗಿ ಮಾಡಿರುವ ಅಥವಾ ಹಿಂದೂ ಧರ್ಮದಲ್ಲಿನ ಅನೇಕ ವಿತ್ತಂಡಗಳನ್ನು ವಿಮರ್ಶಿಸುವ ಕೆಲಸವನ್ನು ನಾವು ಬೇಕಾಂತ ನೋಡುವುದಿಲ್ಲ. ಅಮೆರಿಕಾದಲ್ಲಿ ಗೋ ಮಾಂಸವನ್ನು ಸೇವಿಸುವ ವಿವೇಕಾನಂದರು ಅದನ್ನು ಹೇಳಿಕೊಳ್ಳುತ್ತಾರೆ. ಆದರೆ ಅದು ಹಿಂದೂಗಳ ಮನಸ್ಸನ್ನು ನೋಯಿಸುವುದಕ್ಕಾಗಿ ಅಲ್ಲ. ಹಿಂದೂಗಳನ್ನು ಅನಿಷ್ಠ ಸಾಂಕೇತಿಕಗಳಿಂದ ಹೊರಗೆ ತಂದು ಸಮಕಾಲೀನ ಸತ್ಯವನ್ನು ಕಾಣಿಸಲು ಈ ರೀತಿ ಮಾಡುತ್ತಾರೆ. ಗೋವುಗಳನ್ನು ನಾವು ರೈತರ ಹೊಲದಲ್ಲಿ ಸಂರಕ್ಷಿಸಬೇಕು ಎಂಬುದು ವಿವೇಕಾನಂದರು ಪ್ರತಿಪಾದನೆ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಸಾಹಿತಿ ಡಾ.ಮಹಾಬಲೇಶ್ವರ ರಾವ್ ವಹಿಸಿದ್ದರು. ಚಿಂತಕ ಪ್ರೊ. ಫಣಿರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಸತ್ಯ ಹೇಳುವ ರಾಹುಲ್ ಗಾಂಧಿ ತಮಾಷೆ ವಸ್ತು !

ಸತ್ಯವನ್ನು ಹೇಳುವ ರಾಹುಲ್ ಗಾಂಧಿ ಇಂದು ತಮಾಷೆ ವಸ್ತುವಾಗಿ ಕಾಣುತ್ತಾರೆ. ಸುಳ್ಳು ಹೇಳುವ ನರೇಂದ್ರ ಮೋದಿ ಗಟ್ಟಿ ಮನುಷ್ಯರಾಗಿದ್ದಾರೆ. ಯಾಕೆಂದರೆ ರಾಹುಲ್ ಗಾಂಧಿ ಹಿಂದೆ ಇರುವ ಸಿದ್ಧರಾಮಯ್ಯ, ಡಿಕೆಶಿಯನ್ನು ಜನ ನಂಬುತ್ತಿಲ್ಲ. ಅದೇ ರೀತಿ ಯಡಿಯೂರಪ್ಪರನ್ನು ಕೂಡ ನಂಬುದಿಲ್ಲ. ಆದರೆ ಅವರ ಹಿಂದೆ ಇರುವ ರಾಮನನ್ನು ಜನ ನಂಬುತ್ತಿದ್ದಾರೆ ಎಂದು ಪ್ರಸನ್ನ ಹೇಳಿದರು.

ಇವತ್ತಿನ ಸಭ್ಯತೆ ಶೇ. 80ರಷ್ಟು ಸಾಯುವ ಹಾಗೂ ಶೇ.20ರಷ್ಟು ಬದುಕುವ ಪರಿಸ್ಥಿತಿಯಲ್ಲಿದೆ. ಸಭ್ಯತೆ ಇಂದು ಆಳವಾದ ಅಪಾಯದಲ್ಲಿ ಸಿಕ್ಕಿಕೊಂಡಿದೆ ಎಂಬುದು ಪ್ರತಿದಿನ ಹಿಂಸೆಯಲ್ಲಿ ತೊಡಗಿಸಿಕೊಂಡವರು ಸೇರಿದಂತೆ ಪ್ರತಿ ಯೊಬ್ಬರಿಗೂ ಗೊತ್ತಿದೆ. ಈ ಆತಂಕದಿಂದ ಹೊರಗಡೆ ಬರುವುದನ್ನು ನಾವು ಕಂಡುಕೊಳ್ಳಬೇಕಾಗಿದೆ. ಪ್ರಸ್ತುತ ಅಸಭ್ಯತೆಯ ಒಡಲಿನಿಂದ ಹುಟ್ಟಿರುವ ಆತಂಕ ವನ್ನು ಕೇವಲ ರಾಜಕೀಯವಾಗಿ ಎದುರಿಸುವ ಸಾಧ್ಯವಿಲ್ಲ. ಈ ಅಸಭ್ಯತೆಗೆ ಕೆಟ್ಟವರು ಮಾತ್ರವಲ್ಲ ಮೌನವಾಗಿರುವ ನಾವು ಕೂಡ ಕಾರಣರಾಗಿದ್ದೇವೆ ಎಂದರು.

ಶೂದ್ರರಿಗೆ ಸಭ್ಯತೆ ತೋರಿಸಿಕೊಡಿ

ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವ ಮಧ್ಯಮ ವರ್ಗದ ಇಂಗ್ಲಿಷ್ ಕಲಿತವರು ಯಂತ್ರಗಳ ಹಿಂದೆ ಅಡಗಿಕೊಂಡು ಕ್ರೌರ್ಯವನ್ನು ಪ್ರತಿ ಪಾದಿಸುತ್ತಿದ್ದಾರೆ. ರಾಜಕೀಯ ಪಕ್ಷ ಪ್ರತಿಪಾದಿಸುವ ಹಿಂಸೆಯನ್ನು ಈ ದೇಶದ ಬಡವರು, ಶೂದ್ರರು ಜಾರಿಗೊಳಿಸುತ್ತಿದ್ದಾರೆ. ಬಡವನನ್ನು ಬಡವರಿಂದಲೇ ಬಗ್ಗುಬಡಿಯಲಾಗುತ್ತಿದೆ. ನಾವು ಸೋತರು ಪರವಾಗಿಲ್ಲ, ಈ ಶೂದ್ರ ಯುವಕರಿಗೆ ಕಂಡ ಸತ್ಯವನ್ನು ಧೈರ್ಯವಾಗಿ ಹೇಳುವ ಮೂಲಕ ನಿಜವಾದ ಸಭ್ಯತೆ ಯನ್ನು ತೋರಿಸಿಕೊಡಬೇಕಾಗಿದೆ ಎಂದು ಪ್ರಸನ್ನ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News