ಅಲ್ ಮದೀನ ಸಿಲ್ವರ್ ಜುಬಿಲಿ: ಸ್ವಾಗತ ಸಮಿತಿ ರಚನಾ ಸಭೆ

Update: 2018-07-22 16:39 GMT

ನರಿಂಗಾನ, ಜು. 22: 2019 ಫೆಬ್ರವರಿ 1,2,3 ರಂದು ನಡೆಯಲಿರುವ ಅಲ್ ಮದೀನ ಇಸ್ಲಾಮಿಕ್ ಇದರ ಬೆಳ್ಳಿ ಹಬ್ಬದ ಪ್ಲಾನಿಂಗ್ ಬೋರ್ಡ್ ಇದರ ಸಮಾಲೋಚನಾ ಸಭೆಯು ಅಲ್ ಮದೀನದಲ್ಲಿ ಇತ್ತೀಚೆಗೆ ನಡೆಯಿತು.

ಅಲ್ ಮದೀನ ಅಧ್ಯಕ್ಷರಾದ ಅಬ್ಬಾಸ್ ಉಸ್ತಾದ್ ಅಧ್ಯಕ್ಷತೆ ವಹಿಸಿದರು. ಪ್ಲಾನಿಂಗ್ ಬೋರ್ಡ್ ಚೆಯರ್ಮಾನ್ ಎಸ್.ಪಿ.ಹಂಝ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ಎಸ್ ವೈ ಎಸ್ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಎಂಎಸ್ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು. ಎಸ್ ಇ ಡಿ ಸಿ ಇದರ ರಾಜ್ಯಾಧ್ಯಕ್ಷ ಕೆ.ಕೆ. ಮುಹ್ಯುದ್ದೀನ್ ಕಾಮಿಲ್ ಸಖಾಫಿ , ಉಮರ್ ಸಖಾಫಿ ಎಡಪ್ಪಾಲ, ಹುಸೈನ್ ಹಾಜಿ ಪನೀರ್ ಉಪಸ್ಠಿತರಿದ್ದರು.

 ಆಗಸ್ಟ್ 7 ರಂದು ಅಪರಾಹ್ನ 2 ಗಂಟೆಗೆ ಸಮ್ಮೇಳನ ಸ್ವಾಗತ ಸಮಿತಿ ರೂಪೀಕರಣ ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು. ಕರ್ನಾಟಕದ ವಸತಿ ಹಾಗೂ ನಗರಾಭಿವೃದ್ದಿ ಸಚಿವ  ಯು.ಟಿ.ಖಾದರ್ ಸಭೆಯನ್ನು ಉದ್ಘಾಟಿಸಲಿದ್ದು,  ಖ್ಯಾತ ವಾಗ್ಮಿ ಅಬ್ದುಲ್ಲತೀಫ್ ಪಯಸ್ವಿ ವಿಷಯ ಮಂಡಿಸಲಿದ್ದಾರೆ. ಅಲ್ ಮದೀನ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಸ್ಮಾಯಿಲ್ ತಂಙಳ್ ಅಲ್ ಹಾದೀ ಉಜಿರೆ ದುಆ ನೆರವೇರಿಸಲಿದ್ದು, ಎಸ್ ಎಂ ಎ ರಾಜ್ಯಾಧ್ಯಕ್ಷ ಸಯ್ಯಿದ್ ಜಲಾಲುದ್ದೀನ್ ಅಲ್ ಹಾದೀ ತಂಙಳ್  ಯೋಜನಾ ಪತ್ರವನ್ನು ಬಿಡುಗಡೆಗೊಳಿಸುವರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ಮನ್ಶರ್ ಸಹಿತ ಅನೇಕ ಸಾದಾತ್ ಗಳು, ವಿದ್ವಾಂಸರು , ಎಸ್ಸೆಸ್ಸೆಫ್, ಎಸ್ ವೈ ಎಸ್, ಎಸ್ ಎಂ ಎ, ಎಸ್ ಜೆ ಎಂ ಸಹಿತ ವಿವಿಧ ರಾಜ್ಯ ಹಾಗೂ ಜಿಲ್ಲಾ ಸಂಘಟನಾ ನಾಯಕರುಗಳು, ಕಾರ್ಯ ಕರ್ತರು  ಭಾಗವಹಿಸಲಿರುವರು ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News