ಮಣಿಪಾಲ: ಮನೆಗೆ ನುಗ್ಗಿ ಚಿನ್ನಾಭರಣ ಕಳವು
Update: 2018-07-22 22:28 IST
ಮಣಿಪಾಲ, ಜು.22: ದೊಡ್ಡಣಗುಡ್ಡೆ ನೇಕಾರರ ಕಾಲನಿಯ ಮನೆಯೊಂದಕ್ಕೆ ಜು.20ರ ಬೆಳಗ್ಗೆಯಿಂದ ಜು.22ರ ಬೆಳಗ್ಗಿನ ಮಧ್ಯಾವಧಿಯಲ್ಲಿ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಇಂದ್ರಾಳಿಯ ಜಯರಾಮ ಶೆಟ್ಟಿಗಾರ್ ಎಂಬವರ ತಂದೆ ಹಾಗೂ ತಾಯಿ ವಾಸವಾಗಿದ್ದ ದೊಡ್ಡಣಗುಡ್ಡೆ ನೇಕಾರರ ಕಾಲನಿಯ 2ನೇ ಮುಖ್ಯ ರಸ್ತೆಯಲ್ಲಿ ರುವ ಮನೆಯ ಮುಖ್ಯ ದ್ವಾರದ ಬೀಗ ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಬೆಡ್‌ರೂಮ್‌ನಲ್ಲಿದ್ದ ಕಬ್ಬಿಣದ ಕಪಾಟು ಒಡೆದು 1,00,000 ರೂ. ಮೌಲ್ಯದ 50 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.