ಆರ್.ಜೆ.ವಾಝ್‌ಗೆ ಅತ್ಯುತ್ತಮ ಅಧಿಕಾರಿ ಪ್ರಶಸ್ತಿ
Update: 2018-07-23 20:24 IST
ಮಂಗಳೂರು, ಜು.23: ಮಂಗಳೂರು ನಿಲ್ದಾಣದಲ್ಲಿ ಭಾರತೀಯ ಹವಾಮಾನ ವಿಭಾಗ(ಭೂ ವಿಜ್ಞಾನ ಸಚಿವಾಲಯ) ಪ್ರಭಾರ ಅಧಿಕಾರಿಯಾಗಿ ಕಳೆದ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಆರ್.ಜೆ.ವಾಝ್ ಅವರಿಗೆ 2017-18ನೇ ಸಾಲಿನ ಭೂ ವಿಜ್ಞಾನ ಸಚಿವಾಲಯ ನೀಡುವ ಅತ್ಯುತ್ತಮ ಅಧಿಕಾರಿ ಪ್ರಶಸ್ತಿ ಲಭಿಸಿದೆ. ಜು.27ರಂದು ನವದಿಲ್ಲಿಯಲ್ಲಿ ಜರುಗಲಿರುವ ಸಚಿವಾಳಯ ಸ್ಥಾಪನಾ ದಿನದಂದು ಈ ಪ್ರಶಸ್ತಿಯನ್ನು ನೀಡಲಿದ್ದಾರೆ.
ನವೆಂಬರ್ 1985ರಂದು ದಿಲ್ಲಿಯಲ್ಲಿ ಎಸ್‌ಎಸ್‌ಸಿ ಪರೀಕ್ಷೆ ಮೂಲಕ, ಭಾರತೀಯ ಹವಾಮಾನ ವಿಭಾಗಕ್ಕೆ ಸೇರ್ಪಡೆಗೊಂಡು ಜೂನ್ 1988ಕ್ಕೆ ಮಂಗಳೂರು (ಬಜ್ಪೆ) ವಿಮಾನ ನಿಲ್ದಾಣಕ್ಕೆ ವರ್ಗಾವಣೆಗೊಂಡರು. ಸತತ 3 ಭಡ್ತಿ ತೆಗೆದುಕೊಂಡ ಅವರು ಪ್ರಸ್ತುತ ಮೆಟಯೋರೋಲೊಜಿಸ್ಟ್ ‘ಬಿ’ ಆಗಿ ಸತತ 26 ವರ್ಷಗಳಿಂದ ಆಫೀಸರ್ ಇನ್‌ಜಾರ್ಜ್ ಆಗಿ ಸೇವೆ ಸಲ್ಲಿಸಿದ್ದಾರೆ.