ಚುನಾವಣೆಯಲ್ಲಿ ಹಸ್ತಕ್ಷೇಪವಿಲ್ಲ: ಪಾಕ್ ಸೇನೆ

Update: 2018-07-23 15:57 GMT

ಇಸ್ಲಾಮಾಬಾದ್, ಜು. 23: ಚುನಾವಣೆಯಲ್ಲಿ ತಾನು ಹಸ್ತಕ್ಷೇಪ ಮಾಡುತ್ತಿದ್ದೇನೆ ಎಂಬ ಆರೋಪಗಳನ್ನು ಪಾಕಿಸ್ತಾನದ ಸೇನೆ ರವಿವಾರ ನಿರಾಕರಿಸಿದೆ ಹಾಗೂ ಈ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸೂಕ್ರ ಪ್ರಕ್ರಿಯೆ ಆರಂಭಿಸುವಂತೆ ಸುಪ್ರೀಂ ಕೋರ್ಟ್‌ಗೆ ಕರೆ ನೀಡಿದೆ.

ಸೇನೆಯ ಗುಪ್ತಚರ ಸಂಸ್ಥೆ ಐಎಸ್‌ಐ ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ ಎಂಬುದಾಗಿ ಇಸ್ಲಾಮಾಬಾದ್ ಹೈಕೋರ್ಟ್ ನ್ಯಾಯಾಧೀಶ ಶೌಕತ್ ಅಝೀಝ್ ಸಿದ್ದೀಕಿ ಶನಿವಾರ ಆರೋಪಿಸಿದ ಬಳಿಕ, ಸೇನೆ ಈ ಪ್ರತಿಕ್ರಿಯೆ ನೀಡಿದೆ.

ಸೇನೆಯ ಪ್ರತಿಕ್ರಿಯೆಯನ್ನು ಅದರ ಮುಖ್ಯ ವಕ್ತಾರ ಆಸಿಫ್ ಗಫೂರ್ ಟ್ವೀಟ್ ಮಾಡಿದ್ದಾರೆ.

‘‘ಇಸ್ಲಾಮಾಬಾದ್ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಾಧೀಶರೊಬ್ಬರು ನ್ಯಾಯಾಂಗ ಮತ್ತು ಪ್ರಮುಖ ಗುಪ್ತಚರ ಸಂಸ್ಥೆ ಸೇರಿದಂತೆ ಸರಕಾರಿ ಸಂಸ್ಥೆಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ’’ ಎಂದು ಗಫೂರ್‌ರ ಹೇಳಿಕೆ ತಿಳಿಸಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಕುಟುಂಬದ ವಿರುದ್ಧದ ಪ್ರಕರಣಗಳಲ್ಲಿ ಐಎಸ್‌ಐ ಸಿಬ್ಬಂದಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದಾಗಿ ಶನಿವಾರ ರಾವಲ್ಪಿಂಡಿ ವಕೀಲ ಸಂಘದ ಸಭೆಯೊಂದರಲ್ಲಿ ಮಾತನಾಡಿದ್ದ ನ್ಯಾ. ಸಿದ್ದೀಕಿ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News